Breaking News

ರಾಜ್ಯದ ಮೂಲೆ ಮೂಲೆಗೂ ರಸ್ತೆಗಳನ್ನು ಸಂಪರ್ಕಿಸಲು ವಿಶೇಷ ಅನುದಾನ: ಸಚಿವ ಸತೀಶ ಜಾರಕಿಹೊಳಿ

ಬ್ಯಾಡಗಿ: ರಸ್ತೆಗಳ ಅಭಿವೃದ್ಧಿ ರಾಜ್ಯದ ಪ್ರಗತಿಗೆ ಮಾನದಂಡವಾಗಿದೆ. ಸಮರ್ಪಕ ರಸ್ತೆಗಳು ಕೃಷಿ, ಕೈಗಾರಿಕೆ, ವಾಣಿಜ್ಯ ಹಾಗೂ ಆರ್ಥಿಕ ಅಭಿವೃದ್ಧಿ ಬೆಳವಣಿಗೆಯನ್ನು ನಿರ್ಧರಿಸಲಿದ್ದು, ರಾಜ್ಯದ ಮೂಲೆ ಮೂಲೆಗಳಿಗೂ ರಸ್ತೆಗಳನ್ನು ಸಂಪರ್ಕಿಸುವಲ್ಲಿ ಆದ್ಯತೆಗೆ ಅನುಗುಣವಾಗಿ ವಿಶೇಷ ಅನುದಾನ ನೀಡುವುದಾಗಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ಲೋಕೋಪಯೋಗಿ ಇಲಾಖೆ ವತಿಯಿಂದ ₹ 22 ಕೋಟಿ ವೆಚ್ಚದಲ್ಲಿ ಪಟ್ಟಣದ ಅಗಸನಹಳ್ಳಿಯಿಂದ ಶಿಡೇನೂರ ಗ್ರಾಮದವರೆಗೆ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ರಸ್ತೆಯು ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದ್ದು ಸಾಮಾಜಿಕ ಪ್ರಯೋಜನಗಳಿಗೆ ಬಹಳ ನಿರ್ಣಾಯಕವಾಗಿವೆ. ದೇಶ ಅಭಿವೃದ್ಧಿ ಹೊಂದುವುದು ಸೇರಿದಂತೆ ಉದ್ಯೋಗ, ಸಾಮಾಜಿಕ, ಆರೋಗ್ಯ ಮತ್ತು ಶಿಕ್ಷಣ ಸೇವೆ ಸೇರಿದಂತೆ ಬಡತನ ಮತ್ತು ಪ್ರತಿಕೂಲತೆ ವಿರುದ್ಧ ಹೋರಾಡಲು ರಸ್ತೆಗಳು ನಿರ್ಣಾಯಕವಾಗಿವೆ ಎಂದರು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *