ಕಾಸರಗೋಡು: ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 22 ಕಿಲೋ ಗಾಂಜಾ ಸಾಗಾಟ ನಡೆಸಿದ ಚೆಂಗಳ ಬಂಬ್ರಾಣಿನಗರ ಶಬೀಬ್ ಮಂಜಿಲ್‌ನ ಬಿ.ಎಸ್.ಅಬ್ದುಲ್ ಸಕೀರ್(40)ಗೆ ಕಾಸರಗೋಡು ಜಿಲ್ಲಾ ಅಡಿಶನಲ್ ಸೆಶನ್ಸ್ ನ್ಯಾಯಾಲಯ (ದ್ವಿತೀಯ) 20 ವರ್ಷ ಕಠಿನ ಸಜೆ ಹಾಗೂ 2 ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಆರು ತಿಂಗಳು ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ. 2020ರ ಫೆಬ್ರವರಿ 12 ರಂದು ಬೆಳಗ್ಗೆ 7 ಗಂಟೆಗೆ ಮಂಜೇಶ್ವರ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ದಳ ಗಾಂಜಾ ಸಹಿತ ಆರೋಪಿಯನ್ನು ಬಂಧಿಸಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

