ನವದೆಹಲಿ: ಭಾರತ ಸರ್ಕಾರದ ಅನುದಾನಿತ ತಾಂತ್ರಿಕ ಸಂಸ್ಥೆಯಲ್ಲಿ ನಾಲ್ಕು ವರ್ಷಗಳ ಪದವಿಪೂರ್ವ ಎಂಜಿನಿಯರಿಂಗ್ ಕಾರ್ಯಕ್ರಮವನ್ನು ಮುಂದುವರಿಸಲು ಇಂಡೋ ಪೆಸಿಫಿಕ್ ಪ್ರದೇಶದ ವಿದ್ಯಾರ್ಥಿಗಳಿಗೆ 500,000 ಡಾಲರ್ (ಸುಮಾರು 4.17 ಕೋಟಿ ರೂ.) ಮೊತ್ತದ 50 ಕ್ವಾಡ್ ವಿದ್ಯಾರ್ಥಿ ವೇತನಗಳನ್ನು ನೀಡುವ ಹೊಸ ಉಪಕ್ರಮವನ್ನು ಭಾರತ ಅನಾವರಣಗೊಳಿಸಿದೆ.
ಈ ಪ್ರಕಟಣೆಯು ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಾಯಕರು ಹೊರಡಿಸಿದ ವಿಲ್ಮಿಂಗ್ಟನ್ ಘೋಷಣೆ ಜಂಟಿ ಹೇಳಿಕೆಯ ಭಾಗವಾಗಿತ್ತು.
ನಮ್ಮ ಜನರು ಮತ್ತು ನಮ್ಮ ಪಾಲುದಾರರ ನಡುವಿನ ಆಳವಾದ ಮತ್ತು ಶಾಶ್ವತ ಸಂಬಂಧಗಳನ್ನ ಬಲಪಡಿಸಲು ಕ್ವಾಡ್ ಬದ್ಧವಾಗಿದೆ. ಕ್ವಾಡ್ ಫೆಲೋಶಿಪ್ ಮೂಲಕ, ನಾವು ಮುಂದಿನ ಪೀಳಿಗೆಯ ವಿಜ್ಞಾನ, ತಂತ್ರಜ್ಞಾನ ಮತ್ತು ನೀತಿ ನಾಯಕರ ಜಾಲವನ್ನು ನಿರ್ಮಿಸುತ್ತಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಗೂಗಲ್, ಪ್ರಾಟ್ ಫೌಂಡೇಶನ್ ಮತ್ತು ವೆಸ್ಟರ್ನ್ ಡಿಜಿಟಲ್ನಂತಹ ಖಾಸಗಿ ವಲಯದ ಪಾಲುದಾರರ ಬೆಂಬಲದೊಂದಿಗೆ ಕ್ವಾಡ್ ಫೆಲೋಶಿಪ್ ಜಾರಿಗೆ ತರುವಲ್ಲಿ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಎಜುಕೇಶನ್ ಪಾತ್ರವನ್ನು ನಾಯಕರು ಒಪ್ಪಿಕೊಂಡರು.
ಭಾರತ ಸರ್ಕಾರದ ಅನುದಾನಿತ ತಾಂತ್ರಿಕ ಸಂಸ್ಥೆಯಲ್ಲಿ 4 ವರ್ಷಗಳ ಪದವಿಪೂರ್ವ ಎಂಜಿನಿಯರಿಂಗ್ ಕಾರ್ಯಕ್ರಮವನ್ನ ಮುಂದುವರಿಸಲು ಇಂಡೋ ಪೆಸಿಫಿಕ್ ವಿದ್ಯಾರ್ಥಿಗಳಿಗೆ 500,000 ಡಾಲರ್ ಮೌಲ್ಯದ ಐವತ್ತು ಕ್ವಾಡ್ ವಿದ್ಯಾರ್ಥಿವೇತನಗಳನ್ನು ನೀಡುವ ಹೊಸ ಉಪಕ್ರಮವನ್ನು ಘೋಷಿಸಲು ಭಾರತ ಸಂತೋಷಪಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಡೆಲಾವೇರ್ನ ವಿಲ್ಮಿಂಗ್ಟನ್ನಲ್ಲಿ ನಡೆದ ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಯುಎಸ್ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ಭಾಗವಹಿಸಿದ ನಂತರ ಈ ಪ್ರಕಟಣೆ ಹೊರಬಿದ್ದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

