ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯನವರೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಇಲ್ಲವೇ ತಾಕತ್ತಿದ್ದಾರೆ ಮುಡಾ ಪಕರಣವನ್ನು ಸಿಬಿಐ ಗೆ ವಹಿಸಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅಹಿಂದ ಹೆಸರಲ್ಲಿ ಸಮಾಜವಾದಿ ಎಂದು ಅಡಳಿತಕ್ಕೆ ಬಂದವರು ಮೊದಲು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ನಂತರ ಗವರ್ನರ್ ಮೇಲೆ ಆರೋಪ ಮಾಡಿದ್ರು ಪ್ರತಿಭಟನೆ ವೇಳೆ ರಾಜ್ಯಪಾಲರ ಫೋಟೋಗೆ ಚಪ್ಪಲಿ ಹಾರ ಹಾಕಿದ್ರು, ಆದ್ರು ಸರ್ಕಾರ ಏನೂ ಕ್ರಮ ಕೈಗೊಳ್ಳಲಿಲ್ಲ ಸಿದ್ದರಾಮಯ್ಯ ಆಡಳಿತದಲ್ಲಿ ಯಾವ ವ್ಯವಸ್ಥೆ ಇದೆ ಅನ್ನೋದಕ್ಕೆ ಇದು ಉದಾಹರಣೆ. ಸಿದ್ದರಾಮಯ್ಯ ನನ್ನ ಪ್ರಶ್ನೆಗೆ ಉತ್ತರ ಕೊಡಲೇ ಇಲ್ಲ ಅವರಿಗೆ ಅನುಕೂಲ ಆಗೋ ಪ್ರಶ್ನೆಗೆ ಉತ್ತರ ಕೊಡ್ತಾರೆ, ರಾಜ್ಯದ ಬಹುತೇಕ ಕಡೆ ವಿಧವಾ ವೇತನ, ವೃದ್ದಾಪ್ಯ ವೇತನ, ವಿದ್ಯಾರ್ಥಿ ವೇತನ ಬರ್ತಾ ಇಲ್ಲ ರಾಜ್ಯವನ್ನು ಈ ಸ್ಥಿತಿಗೆ ತಂದು ರಾಜ್ಯಪಾಲರ ಮೇಲೆ ಹರಿಹಾಯ್ತಿದ್ದಾರೆ ಎಂದರು.
ಹೈಕೋರ್ಟ್ ಸುದೀರ್ಘವಾದ ವಿಚಾರಣೆ ಮಾಡಿದ ಬಳಿಕ ಷಡ್ಯಂತ್ರ ಅಂತಾರೆ, ಏನಿದು ನಾನ್ಸೆನ್ಸ್ ಅನ್ನೋದೆ ಅರ್ಥವಾಗ್ತಿಲ್ಲ 62 ಕೋಟಿ ಮೌಲ್ಯದ 14 ಸೈಟ್ ಪಡೆದುಕೊಂಡಿದ್ದಾರೆ ಕೋರ್ಟ್ ಆದೇಶದಲ್ಲಿ ಕೋಟ್ ಮಾಡಿದೆ. ಆದ್ರೆ ಇವ್ರು ದಿನ ಬೆಳಿಗ್ಗೆ ರಾಜ್ಯಾಪಾಲರನ್ನು ಬೈತಾರೆ ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆ ಅಂತಾರೆ ಕೋರ್ಟ್ ಹೇಳಿದ ನಂತರವೂ ಷಡ್ಯಂತ್ರ ಅಂದ್ರೆ ಸಿಬಿಐಗೆ ಕೊಡಿ ಕಾಂಗ್ರೆಸ್ ಅಂದ್ರೆ ಬ್ರಷ್ಟಾಚಾರ, ಬ್ರಷ್ಟಾಚಾರ ಅಂದ್ರೆ ಕಾಂಗ್ರೆಸ್ ಸಿಬಿಐಗೆ ಕೊಡಿ,ಯಾಕೆ ಭಯ ಕಾಡ್ತಿದೆಯಾ, ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಅವರ ಕುಟುಂಬ ಮುಖ್ಯ. ರಾಜ್ಯಪಾಲರ ವಿರುದ್ದ ಮಾತಾಡೋದಕ್ಕೆ ಯಾವ ಅರ್ಥ ಇಲ್ಲ, ಯಡಿಯೂರಪ್ಪ ವಿಚಾರದಲ್ಲಿ ಸಿದ್ದರಾಮಯ್ಯ ಏನ ಅಂದ್ರು ಎಲ್ಲ ಗೊತ್ತಿದೆ ಕಾಂಗ್ರೆಸ್ ನೈತಿಕವಾಗಿ ದಿವಾಳಿ ಎದ್ದು ಹೋಗಿದೆ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ಕೊಡಬೇಕು ನೀವು ರಾಜೀನಾಮೆ ಕೊಡಲ್ಲ ಅಂದರೆ ತಾಕತ್ ಇದ್ರೆ ಸಿಬಿಐಗೆ ಕೊಡಿ ಇಲ್ಲಿ ಅಧಿಕಾರಿಗಳು ಸರಿಯಾಗಿ ತನಿಖೆ ಮಾಡಲ್ಲ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

