ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ರೆ ಅವರ ವ್ಯಕ್ತಿತ್ವಕ್ಕೆ ಒಳ್ಳೆಯದು. ಭಂಡತನ ಇದ್ರೆ ಏನು ಮಾಡೋಕಾಗುತ್ತೆ? ಎಂದು ಸಿಎಂ ಸಿದ್ದರಾಮಯ್ಯ ದಸರಾ ಉದ್ಘಾಟನೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಇನ್ನೇಲಾದ್ರೂ ಅರ್ಥ ಮಾಡಿಕೊಳ್ಳಬೇಕು. ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದೇನೆ ಅಂತ ಹೇಳ್ಕೊತಾರೆ. ನೈತಿಕತೆ ಬಗ್ಗೆ ಮಾತನಾಡ್ತಿದ್ರು. ಯಡಿಯೂರಪ್ಪ ಅವರ ಮೇಲೆ ಎಫ್‌ಐಆರ್ ಆದಾಗ ಏನು ಮಾತಾಡಿದ್ದಾರೆ ಅಂತ ನೋಡಲಿ. ಎಲ್ಲಾ ಕೆಳಗಿನ ಅಧಿಕಾರಿಗಳು ಪ್ರಾಮಾಣಿಕವಾಗಿ ಹೇಗೆ ತನಿಖೆ ಮಾಡೋಕೆ ಆಗುತ್ತೆ? ಅದಕ್ಕೆ ರಾಜೀನಾಮೆ ಕೊಡೋಕು ಎಂದಿದ್ದ ಸಿದ್ದರಾಮಯ್ಯ ಈಗೇಕೆ ರಾಜೀನಾಮೆ ಕೊಡ್ತಿಲ್ಲ. ಅವರ ಹೇಳಿಕೆಯನ್ನ ಅವರೇ ನೋಡಿಕೊಳ್ಳಲಿ. ಇನ್ನು ಮೈಸೂರು ದಸರಾ ಉದ್ಘಾಟನೆ ಮಾಡೋದ ಅವರಿಗೆ ಬಿಟ್ಟಿದ್ದು ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

