ಕೊಲಂಬೊ: ನ್ಯಾಷನಲ್ ಪೀಪಲ್ಸ್ ಪವರ್ ಪಕ್ಷದ ನೇತೃತ್ವದಲ್ಲಿ ನೂತನವಾಗಿ ರಚನೆಯಾದ ಸರ್ಕಾರದಲ್ಲಿ ಕೇವಲ ಮೂವರು ಮಂತ್ರಿಗಳೊಂದಿಗೆ ಮೊದಲ ಸಚಿವ ಸಂಪುಟ ಸಭೆ ನಡೆದಿದೆ.
ನೂತನವಾಗಿ ನೇಮಕಗೊಂಡ ಅಧ್ಯಕ್ಷ ಅನುರ ಕುಮಾರ ಡಿಸಾನಾಯಕೆ ಮತ್ತು ಪ್ರಧಾನ ಮಂತ್ರಿ ಡಾ.ಹರಿಣಿ ಅಮರಸೂರ್ಯ ಅವರೊಂದಿಗೆ ಸಚಿವ ಸಂಪುಟದ ವಕ್ತಾರ ವಿಜಿತ್ ಹೆರಾತ್ ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಇದು ಅತ್ಯಂತ ಚಿಕ್ಕ ಸಚಿವ ಸಂಪುಟ ಸಭೆ ಎಂದು ವಿಜಿತ್ ಅವರು ತಿಳಿಸಿದ್ದಾರೆ.
ನ.14 ರಂದು ಚುನಾವಣೆ ನಡೆಸುವ ಸಲುವಾಗಿ ಸಂಸತ್ತನ್ನು ಕಳೆದ ವಾರ ವಿಸರ್ಜಿಸುವ ಮೊದಲು ಅಧ್ಯಕ್ಷ ಡಿಸ್ಸಾನಾಯಕೆ ಅವರು ತಮ್ಮನ್ನು ಒಳಗೊಂಡಂತೆ ನಾಲ್ಕು ಜನರ ಸಂಪುಟವನ್ನು ನೇಮಿಸಿದ್ದರು. 25 ಮಂತ್ರಿಗಳಿಗೆ ಸಚಿವ ಸಂಪುಟವನ್ನು ಸೀಮಿತಗೊಳಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ಗೆದ್ದ ಬಳಿಕವೂ ಅದೇ ಸಂಖ್ಯೆಯನ್ನು ಉಳಿಸಿಕೊಳ್ಳಲಾಗುವುದು ಯಾವುದೇ ರಾಜ್ಯ ಖಾತಗೆ ಸಚಿವರನ್ನು ನೇಮಕ ಮಾಡುವುದಿಲ್ಲ ಎಂದು ವಿಜಿತ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





