Breaking News

29 ಟನ್ ಕಾಚು ಮರ ವಶಕ್ಕೆ

ಹೊಳೆನರಸೀಪುರ: ಪಟ್ಟಣದ ಚಿಟ್ಟನಹಳ್ಳಿ ಹೌಸಿಂಗ್ ಬೋರ್ಡ್ ಕಿಂಗ್ಸ್ ಆಯಂಡ್ ಟ್ರೇಡರ್ಸ್‌ನಲ್ಲಿ ಅನುಮತಿ ಇಲ್ಲದೆ ಶೇಖರಿಸಿಟ್ಟಿದ್ದ ಕೋಟ್ಯಾಂತರ ರೂ.ಬೆಲೆ ಬಾಳುವ ಸುಮಾರು 29 ಟನ್‌ನಷ್ಟು ಕಾಚು ಮರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ. ವಶಕ್ಕೆ ಪಡೆದ ಮರವನ್ನು ಇಲಾಖೆಯ ಸಂಗ್ರಹ ಸ್ಥಳಕ್ಕೆ ರವಾನಿಸಿ ತನಿಖೆ ಮುಂದುವರಿಸಲಾಗಿದೆ ಎಂದು ವಲಯಾರಣ್ಯ ಅಧಿಕಾರಿ ದಿಲೀಪ್ ಕುಮಾರ್ ತಿಳಿಸಿದ್ದಾರೆ. ಹೊರ ರಾಜ್ಯಗಳಿಗೆ ಕಳುಹಿಸಲು ಬೀದರ್ ಜಿಲ್ಲೆಯಿಂದ ಮರದ ವ್ಯಾಪಾರಿಯೊಬ್ಬ ಅಪರೂಪದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಮರದ ತುಂಡುಗಳನ್ನು ತಂದಿಟ್ಟಿದ್ದರು. ಅರ್ಫದ್ ಹುಸೇನ್ ಎಂಬುವವರಿಗೆ ಸೇರಿದ ಪಟ್ಟಣದ ಕೈಗಾರಿಕಾ ವಲಯದ ಕಿಂಗ್ಸ್ ಆಯಂಡ್ ಟ್ರೇಡರ್ಸ್‌ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು. ಕಗ್ಗಲಿ ಮರ ಸಾಗಣೆಗೆ ಪರವಾನಗಿ ಪಡೆದು ಕಾಚು ಮರ ಸಂಗ್ರಹಿಸಿದ್ದರು. ಇದು ಔಷಧಯುಕ್ತವಾಗಿದ್ದು, ಇದರ ಸಾಗಣೆಗೆ ಪರವಾನಗಿ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ಕಾಚು ಮರಗಳನ್ನು ವಶಕ್ಕೆ ಪಡೆದರು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *