Breaking News

ಸಂಗಾರೆಡ್ಡಿ : ಹೆತ್ತು ಸಾಕಿದ 3 ಮಕ್ಕಳನ್ನೇ ಕೊಂದ ‘ಪಾಪಿ’ ತಾಯಿ;

ಪ್ರಿಯಕರನೊಂದಿಗೆ ಮದುವೆಯಾಗಿ ಹೊಸ ಜೀವನ ನಡೆಸಲು ಇಚ್ಚಿಸಿದ್ದ ಮಹಿಳೆಯೊಬ್ಬಳು ಅದಕ್ಕೆ ಅಡ್ಡಿಯಾಗಿದ್ದ ತನ್ನ ಮೂರು ಮಕ್ಕಳನ್ನು ಕೊಂದು ಹಾಕಿರುವ ಧಾರುಣ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ.ಮೊದಲು ತನ್ನ ಹಿರಿಯ ಮಗ ಸಾಯಿಕೃಷ್ಣ, ನಂತರ ಅವಳ ಮಗಳು ಮಧುಪ್ರಿಯಾ ಮತ್ತು ಅವಳ ಕಿರಿಯ ಮಗ ಗೌತಮ್ ಕುತ್ತಿಗೆಗೆ ಟವಲ್ ಬಿಗಿದು ಅವರ ಬಾಯಿಗೆ ಬಟ್ಟೆ ತುರಿಕಿ ಕಿರುಚಾಡದಂತೆ ಮಾಡಿ ಕೊಂದು ಮುಗಿಸಿದ್ದಾಳೆ.ಆಸ್ಪತ್ರೆಯಲ್ಲಿ ರಜಿತಾಳನ್ನು ದಾಖಲಿಸಿ ಬಳಿಕ ಮನೆಗೆ ಬಂದು ಮಕ್ಕಳನ್ನು ನೋಡಿದಾಗ ಅವರು ಸಾವನ್ನಪ್ಪಿರುವುದು ತಿಳಿದಿದೆ. ಕೂಡಲೇ ಚೆನ್ನಯ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಾವಿಗೀಡಾದ ಮಕ್ಕಳ ತಂದೆ ಚೆನ್ನಯ್ಯ ಮತ್ತು ತಾಯಿ ರಜಿತಾಳ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ರಜಿತಾಳ ಮೊಬೈಲ್ ನಿಂದ ಒಂದು ಸಂಖ್ಯೆಗೆ ಹೆಚ್ಚು ಬಾರಿ ಕರೆಗಳು ಹೋಗಿದ್ದು, ಈ ಕರೆಗಳನ್ನು ಪರಿಶಿಲೀಸಿ ಅನುಮಾನಗೊಂಡ ಪೊಲೀಸರು ಮೊದಲು ರಜಿತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *