ತುಮಕೂರು: ತುಮಕೂರು-ಚಿತ್ರದುರ್ಗ, ತುಮಕೂರು-ರಾಯದುರ್ಗ ರೈಲ್ವೆ ಯೋಜನೆ 2027ಕ್ಕೆ ಮುಕ್ತಾಯಗೊಳ್ಳಲಿದ್ದು, ಇದಕ್ಕಾಗಿ ತ್ವರಿತ ಕಾಮಗಾರಿಗಳು, ಭೂಸ್ವಾಧೀನ ಪ್ರಕ್ರಿಯೆ ಎಲ್ಲವೂ ಚುರುಕುಗೊಂಡಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ರೈಲ್ವೆಗೆ ಜಾಗವನ್ನು ಹಸ್ತಾಂತರಿಸಲಾಗಿದೆ. ಇನ್ನು ಕೇವಲ ಶೇ.2 ರಷ್ಟು ಹಸ್ತಾಂತರಿಸುವ ಕೆಲಸ ಮಾತ್ರ ಬಾಕಿ ಇದೆ. ಈ ಕಾರ್ಯವನ್ನು ಬೇಗ ಮುಗಿಸಲಾಗುವುದು ಎಂದು ಹೇಳಿದರು. ಚಿತ್ರದುರ್ಗ ವ್ಯಾಪ್ತಿಯಲ್ಲಿ 250 ಎಕರೆ ಭೂಸ್ವಾಧೀನ ಮತ್ತು ಹಸ್ತಾಂತರ ಬಾಕಿ ಇದೆ. ಇದನ್ನು ಪೂರ್ಣಗೊಳಿಸಿ ಕಾರ್ಯಯೋಜನೆಗೆ ವೇಗ ನೀಡಲಾಗುವುದು ಎಂದು ಅವರು ತಿಳಿಸಿದರು.
ರೈಲ್ವೆ ಮಾರ್ಗದಲ್ಲಿ ಆಟೋಮ್ಯಾಟಿಕ್ ಸಿಗ್ನಲ್ ಲೈನ್ ಆಳವಡಿಕೆ ಕಾರ್ಯ ಮಾಡಲಾಗುವುದು. ತುಮಕೂರಿಗೆ ಮತ್ತಷ್ಟು ಕೊಡುಗೆ ನೀಡುವ ಉದ್ದೇಶ ಇದೆ. ಇದಕ್ಕಾಗಿ ಕೇಂದ್ರದ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಲಾಗುವುದು ಎಂದು ಸಚಿವ ಸೋಮಣ್ಣ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





