Breaking News

3 ವರ್ಷದಿಂದ ಪ್ರೀತಿಸುವಂತೆ ಕಿರುಕುಳ: ಒಪ್ಪದಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿಕೊಂಡ ಯುವಕ!

ಮೈಸೂರು: ಪ್ರೇಮ ನಿವೇದನೆ ನಿರಾಕರಿಸಿದ್ದ ಯುವತಿಗೆ ಮೂರು ವರ್ಷಗಳಿಂದ ಕಿರುಕುಳ ನೀಡುತ್ತಿದ್ದ ಆರೋಪದ ಯುವಕನೊಬ್ಬ ಆಕೆಯ ಮೇಲೆ ಗಂಭೀರ ದಾಳಿ ನಡೆಸಿದ ಘಟನೆ ಸೆ.29ರಂದು ವಿಜಯನಗರದ ಡಿಪ್ಲೊಮಾ ಕಾಲೇಜಿನ ಹಾಸ್ಟೆಲ್ ಬಳಿ ನಡೆದಿದೆ. ಹಲಗೂರು ಗ್ರಾಮದ ಚಂದನ್ (27) ಆರೋಪಿಯಾಗಿದ್ದು, ಘಟನೆಯಲ್ಲಿ ಯುವತಿ ಹಾಗೂ ಚಂದನ್ ಇಬ್ಬರೂ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯುವತಿ ಈ ಹಿಂದೆ ಪೋಷಕರೊಂದಿಗೆ ಹಲಗೂರು ಠಾಣೆಗೆ ದೂರು ನೀಡಿದ್ದರೂ, ರಾಜಿ ಪಂಚಾಯಿತಿ ಬಳಿಕವೂ ಚಂದನ್ ಮತ್ತೆ ಆಕೆಯನ್ನು ಹಿಂಬಾಲಿಸಿ ಪ್ರೀತಿ ಹಾಗೂ ಮದುವೆಗೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಸೆ.29ರಂದು ಯುವತಿಯನ್ನು ಅಡ್ಡಗಟ್ಟಿ ಪ್ರೀತಿಸುವಂತೆ ಒತ್ತಾಯಿಸಿದ ಬಳಿಕ, ತನ್ನನ್ನು ತಾನೇ ಬೆಂಕಿಗೆ ಒಡ್ಡಿಕೊಂಡು ಯುವತಿಯನ್ನೂ ಅಪಾಯಕ್ಕೆ ಸಿಲುಕಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಂದನ್‌ಗೆ ಶೇ.50ರಷ್ಟು ಸುಟ್ಟ ಗಾಯಗಳಾಗಿದ್ದು, ಯುವತಿಗೂ ಗಾಯಗಳಾಗಿವೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ವಿಜಯನಗರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಎಫ್‌ಎಸ್‌ಎಲ್ ತಂಡ ಸ್ಥಳ ಪರಿಶೀಲನೆ ನಡೆಸಿದೆ.

Share News

About BigTv News

Check Also

ಹುಬ್ಬಳ್ಳಿಯಲ್ಲಿ ಕಳ್ಳರು ಬಾಲ ಬಿಚ್ಚಿದ್ರಾ..? ರಾತ್ರಿ 2 ಗಂಟೆಗೆ ಮನೆಗೆ ಕನ್ನ! ಹಳೇ ಹುಬ್ಬಳ್ಳಿಯಲ್ಲಿ ಮತ್ತೆ ಕಳ್ಳರ ಹಾವಳಿ..! ಬೀಗ ಮುರಿದು ಮನೆಗೆ ನುಗ್ಗಿದ ಖದೀಮರು..

ಹಳೇ ಹುಬ್ಬಳ್ಳಿಯಲ್ಲಿ ಕಳ್ಳರ ಕೈಚಳಕ..! ರಾತ್ರಿ 2 ಗಂಟೆಗೆ ಮನೆ ಬೀಗ ಮುರಿದು ಕಳ್ಳತನ – ಪೊಲೀಸರ ಪರಿಶೀಲನೆ.. ಹುಬ್ಬಳ್ಳಿ: …

Leave a Reply

Your email address will not be published. Required fields are marked *