Breaking News

ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಪುಂಡರ ಅಟ್ಟಹಾಸ: ಕಾಲಿನಿಂದ ಒದ್ದು, ಹಲ್ಲೆ: ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

ದೊಡ್ಡಬಳ್ಳಾಪುರ: ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಇಬ್ಬರು ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ಪಾಲನಜೋಗಹಳ್ಳಿಯಲ್ಲಿ ನಡೆದಿದೆ. ಹರಹಾನ್ ಸಾರಿಹಾನ್ ಹಾಗೂ ಬಸೀರ್ ಅಲಿಯಾಸ್ ಗಿಡ್ಡ ಜಗಳವಾಡುತ್ತಿದ್ದ ವೇಳೆ ಸ್ಥಳೀಯರು 112ಕ್ಕೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಮಣಿಕಂಠ ಮತ್ತು ರಾಯಪ್ಪ ಪೂಜಾರಿ ಜಗಳ ಬಿಡಿಸಲು ಮುಂದಾದಾಗ ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿ, ಕಾಲಿನಿಂದ ಒದ್ದಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರ ಎದೆ, ಕೈಕಾಲುಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share News

About BigTv News

Check Also

ಹುಬ್ಬಳ್ಳಿಯಲ್ಲಿ ಕಳ್ಳರು ಬಾಲ ಬಿಚ್ಚಿದ್ರಾ..? ರಾತ್ರಿ 2 ಗಂಟೆಗೆ ಮನೆಗೆ ಕನ್ನ! ಹಳೇ ಹುಬ್ಬಳ್ಳಿಯಲ್ಲಿ ಮತ್ತೆ ಕಳ್ಳರ ಹಾವಳಿ..! ಬೀಗ ಮುರಿದು ಮನೆಗೆ ನುಗ್ಗಿದ ಖದೀಮರು..

ಹಳೇ ಹುಬ್ಬಳ್ಳಿಯಲ್ಲಿ ಕಳ್ಳರ ಕೈಚಳಕ..! ರಾತ್ರಿ 2 ಗಂಟೆಗೆ ಮನೆ ಬೀಗ ಮುರಿದು ಕಳ್ಳತನ – ಪೊಲೀಸರ ಪರಿಶೀಲನೆ.. ಹುಬ್ಬಳ್ಳಿ: …

Leave a Reply

Your email address will not be published. Required fields are marked *