Breaking News

ಸೈಬರ್‌ ವಂಚನೆ ತಡೆ ಜಾಗೃತಿಗಾಗಿ “ಸೈಬರ್‌ ಕವಚ’

ಮಂಗಳೂರು: ಸೈಬರ್‌ ವಂಚನೆಗಳಿಂದ ಸಾರ್ವಜನಿಕರನ್ನು ಎಚ್ಚರಿಸಲು ಮಂಗಳೂರು ನಗರ ಪೊಲೀಸರು ಅಕ್ಟೋಬರ್‌ ತಿಂಗಳನ್ನು ‘ಸೈಬರ್‌ ಸುರಕ್ಷತೆ’ ಜಾಗೃತಿ ತಿಂಗಳಾಗಿ ಆಚರಿಸುತ್ತಿದ್ದು, ‘ಸೈಬರ್‌ ಕವಚ’ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಪರಿಚಿತ ಲಿಂಕ್‌, ಎಪಿಕೆ ಫೈಲ್‌, ಉದ್ಯೋಗದ ಆಮಿಷದ ಜಾಹೀರಾತುಗಳನ್ನು ಪರಿಶೀಲಿಸದೆ ಕ್ಲಿಕ್‌ ಮಾಡದಂತೆ ಹಾಗೂ ಬ್ಯಾಂಕ್‌, ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ಬರುವ ಕರೆಗಳಿಗೆ ವೈಯಕ್ತಿಕ ಮಾಹಿತಿ, ಒಟಿಪಿ, ಪಾಸ್‌ವರ್ಡ್‌ ಹಂಚಿಕೊಳ್ಳದಂತೆ ಪೊಲೀಸರು ಎಚ್ಚರಿಕೆ ನೀಡಲಿದ್ದಾರೆ. ಪ್ರತಿ ಪೊಲೀಸ್‌ ಠಾಣೆಯಲ್ಲಿ ಪ್ರತಿದಿನ ಜಾಗೃತಿ ಕಾರ್ಯಕ್ರಮಗಳ ಜತೆಗೆ ವಾಕಥಾನ್‌, ಸೈಕಲ್‌ ರ‍್ಯಾಲಿ, ರೀಲ್ಸ್‌, ಕಾರ್ಟೂನ್‌ ಮತ್ತು ಪೋಸ್ಟರ್‌ ಸ್ಪರ್ಧೆಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಠಾಣೆಯಿಂದ ಜನರ ಮನೆ ಬಾಗಿಲಿನವರೆಗೆ ಸೈಬರ್‌ ಸುರಕ್ಷೆಯ ಸಂದೇಶ ತಲುಪಿಸುವ ಗುರಿ ಹೊಂದಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

Share News

About BigTv News

Check Also

ಬರೋಬ್ಬರಿ 1 ಕೋಟಿ ರೂ.ಗೆ ರೆಡ್ ಸ್ಯಾಂಡ್ ಬೋವಾ ಮಾರಲು ಯತ್ನಿಸಿದವ ಸಿಸಿಬಿ ಬಲೆಗೆ..!

ಬೆಂಗಳೂರು: ಅಪರೂಪದ ‘ರೆಡ್ ಸ್ಯಾಂಡ್ ಬೋವಾ’ ಹಾವು ಹಾಗೂ ಕೋರಲ್ ಸೀ ಫ್ಯಾನ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಎರಡು …

Leave a Reply

Your email address will not be published. Required fields are marked *