Breaking News

ಹುಬ್ಬಳ್ಳಿಯಲ್ಲಿ ಕಳ್ಳರು ಬಾಲ ಬಿಚ್ಚಿದ್ರಾ..? ರಾತ್ರಿ 2 ಗಂಟೆಗೆ ಮನೆಗೆ ಕನ್ನ! ಹಳೇ ಹುಬ್ಬಳ್ಳಿಯಲ್ಲಿ ಮತ್ತೆ ಕಳ್ಳರ ಹಾವಳಿ..! ಬೀಗ ಮುರಿದು ಮನೆಗೆ ನುಗ್ಗಿದ ಖದೀಮರು..

ಹಳೇ ಹುಬ್ಬಳ್ಳಿಯಲ್ಲಿ ಕಳ್ಳರ ಕೈಚಳಕ..!

ರಾತ್ರಿ 2 ಗಂಟೆಗೆ ಮನೆ ಬೀಗ ಮುರಿದು ಕಳ್ಳತನ – ಪೊಲೀಸರ ಪರಿಶೀಲನೆ..

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬೇಪಾರಿ ಪ್ಲಾಟ್, ಶಿವಶಂಕರ ಕಾಲೋನಿಯ 6ನೇ ಕ್ರಾಸ್‌ನಲ್ಲಿ ರಾತ್ರಿ ಸುಮಾರು 2 ಗಂಟೆ ವೇಳೆಗೆ ಮನೆ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ನಡೆದಿದೆ….

ಅಬ್ದುಲ್ ಹಮೀದ್ ಬಳಾರಿ ಎಂಬುವವರ ಮನೆಯಲ್ಲಿ ರಾತ್ರಿ 2 ಗಂಟೆ ಸುಮಾರಿಗೆ ಕಳ್ಳರು ಬೀಗ ಮುರಿದು ಒಳನುಗ್ಗಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ….

ಕಳ್ಳತನವಾಗಿರುವ ವಸ್ತುಗಳು ಹಾಗೂ ಹಣದ ಕುರಿತು ಮಾಹಿತಿ ಕಲೆಹಾಕಲಾಗುತ್ತಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About Shaikh BigTv

Check Also

ರಾಜ್ಯದ ಬುಡಕಟ್ಟು ಸಮುದಾಯದ 95 ಜನರಿಗೆ ವಿದೇಶದಲ್ಲಿ ವ್ಯಾಪಾರದ ಆಸೆ ತೋರಿಸಿ ವಂಚನೆ!

ಶಿವಮೊಗ್ಗ : ವಿದೇಶದಲ್ಲಿ ವ್ಯಾಪಾರದ ಅವಕಾಶವಿದೆ ಎಂದು ನಂಬಿಸಿ ಏಜೆಂಟರು ಕಳುಹಿಸಿದ್ದ ಕರ್ನಾಟಕದ 95 ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದವರು ಆಫ್ರಿಕಾದ …

Leave a Reply

Your email address will not be published. Required fields are marked *