Breaking News

ಬಿಜೆಪಿಯಲ್ಲಿ ಯಾವ ಬಣಾನೂ ಇಲ್ಲ, ಪಣಾನೂ ಇಲ್ಲ : ಕೇಂದ್ರ ಸಚಿವ ವಿ. ಸೋಮಣ್ಣ

ಹುಬ್ಬಳ್ಳಿ: ಬಿಜೆಪಿಯಲ್ಲಿ ಯಾವ ಬಣಾನೂ ಇಲ್ಲ, ಪಣಾನೂ ಇಲ್ಲ. ಸಣ್ಣಪುಟ್ಟ ವ್ಯತ್ಯಾಸಗಳಿರುವುದು ನನಗೆ ಸರಿಯಾದ ಮಾಹಿತಿ ಇಲ್ಲ. ಒಂದಂತೂ ಸತ್ಯ ಬಿಜೆಪಿಯಲ್ಲಿ ಬಣ ಇಲ್ಲ, ಒಂದೇ ಬಣ ಭಾರತೀಯ ಜನತಾ ಪಕ್ಷ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಸಾಹೇಬರು ಯಾಕೆ ಹಾಗೇ ಮಾತನಾಡುತ್ತಾರೋ ನನಗೆ ಗೊತ್ತಿಲ್ಲ. ಸಿಟ್ಟಿನಲ್ಲಿ ಮಾತನಾಡಿದ ಮಾತು ವಾಪಾಸ್‌ ಬರೋಲ್ಲ, ಅದರ ಅವಶ್ಯಕತೆ ಇಲ್ಲ ಎಂದು ನಾನು ಅವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ. ದೇಶದ ಅಭಿವೃದ್ಧಿಯನ್ನ ಬಯಸುತ್ತಿರುವವರು ಪ್ರಧಾನಿಗಳು. ಉಳಿದ ಸಮಸ್ಯೆಗಳನ್ನು ನಾಲ್ಕು ಗೋಡೆ ಮಧ್ಯೆ ಕುಳಿತು ಬಗೆಹರಿಸಿಕೊಳ್ಳೋಣ. ಸಾವಿರ ಕೋಟಿ ರೂಪಾಯಿ ಇಟ್ಟುಕೊಂಡು ಮುಖ್ಯಮಂತ್ರಿ ಆಗಲು ಹೊರಟ ಮಹಾನಾಯಕನ ವಿಷಯ ನನಗೆ ಗೊತ್ತಿಲ್ಲ. ಅನಾವಶ್ಯಕ ಮಾತನಾಡಿ ಯಾರಿಗೂ ನೋವು ಕೊಡೋದು ಬೇಡ, ಪಕ್ಷಕ್ಕೆ ಮುಜುಗರ ಆಗುವುದು ಬೇಡ. ಆಪರೇಷನ್‌ ಮಾಡುವ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ ಎಂದರು.

Share News

About Shaikh BigTv

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *