ಹುಬ್ಬಳ್ಳಿ: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಿಮ್ಮತನವನ್ನ ಉಳಿಸಿಕೊಳ್ಳಿ. ನಡೆದು ಬಂದ ದಾರಿಯನ್ನ ನೆನಪು ಮಾಡಿಕೊಳ್ಳಿ. ನಿಮ್ಮ ಇತಿಹಾಸವನ್ನ ಮುಂದಿನ ಪೀಳಿಗೆಗೆ ಕೊಡಬೇಕು ಎನ್ನುವುದಾದರೇ ರಾಜೀನಾಮೆ ಕೊಡಿ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವುದು ಸರಿಯಲ್ಲ. ಪದೇ ಪದೇ ಮಾತನಾಡಿ ಕೈ, ಕಾಲು ಮತ್ತು ಬಾಯಿ ಗಾಯ ಮಾಡಿಕೊಂಡಿದ್ದಾರೆ. ಈಗ ಏನೂ ಉಳಿದಿಲ್ಲ. ಸದನದಲ್ಲಿ ಚರ್ಚೆ ಮಾಡಿದಾಗ ಅದನ್ನೇ ಅಲ್ಲೇ ಕ್ಲಿಯರ್ ಮಾಡಿದಾಗ ಈ ಖಾಯಿಲೆ ಬರ್ತಾ ಇರಲಿಲ್ಲ. ಒಂದು ತಪ್ಪು ಮುಚ್ಚಿಕೊಳ್ಳಲಿಕ್ಕೆ ಹೋಗಿ 50 ತಪ್ಪುಗಳನ್ನ ಮಾಡ್ತಾ ಇದ್ದಾರೆ. ಅಂತಹ ನಾಯಕ ಈಗ ಅಧಿಕಾರದಲ್ಲಿರುವುದು ಅವಶ್ಯಕತೆ ಇಲ್ಲ. ಸಿದ್ದರಾಮಯ್ಯನವರ ಜೊತೆಗೆ ನಾನು ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನಾವು ಅವರು ಒಟ್ಟಿಗೆ ಜನತಾ ಪಾರ್ಟಿಯಲ್ಲಿ ಇದ್ದವರು. ಮೊದಲನೆಯ ಬಾರಿಗೆ ಮುಖ್ಯಮಂತ್ರಿ ಆದಾಗ, ಎರಡನೇ ಬಾರಿಗೆ ಮುಖ್ಯಮಂತ್ರಿ ಆದಾಗ ನಾವು ಮಾತನಾಡಲಿಲ್ಲ. ಯಾಕೋ ಏನೋ ಗೊತ್ತಿಲ್ಲ ತಪ್ಪು ಆಗಿ ಹೋಗಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

