ಹುಬ್ಬಳ್ಳಿ: ಅಹಿಂದ ನಾಯಕನ ಉಳಿವಿಗಾಗಿ ಹುಬ್ಬಳ್ಳಿಯಿಂದ ಜಾಥಾ ಆರಂಭವಾಗಿದ್ದು, ಜಾಥಾಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ ಚಾಲನೆ ನೀಡಿದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಕೇಳಿ ಬಂದಿದೆ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದೆಂದು, ಹುಬ್ಬಳ್ಳಿಯ ಅಂಬೇಡ್ಕರ್ ವೃತ್ತದದಿಂದ ಜಾಥಾ ಆರಂಭವಾಗಿದೆ. ನಾಳೆ ಸಾಯಂಕಾಲ ಅಹಿಂದ ಜಾಥಾ ಬೆಂಗಳೂರು ತಲುಪಲಿದೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬಾರದೆಂದು ಒತ್ತಾಯ ಮಾಡಿದರು. ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು. ಇವತ್ತು ನಾವೆಲ್ಲರೂ ನಂಬಿಕೆ ಇಟ್ಟಿದ್ದು ಸಂವಿಧಾನದ ಮೇಲೆ. ಅದೇ ಸಂವಿಧಾನದ ಪೀಠಿಕೆಗಳನ್ನ ಇಟ್ಟುಕೊಂಡು ಅಹಿಂದ ಜಾಥಾ ಮಾಡುತ್ತಿದ್ದೇವೆ. ಜನರಲ್ಲಿ ಜಾಗೃತಿಗಾಗಿ ಅಹಿಂದ ಜಾಥಾ ಮಾಡುತ್ತಿದ್ದೇವೆಂದ ನಾಯಕರು.
bigtvnews | Hubli Dharwad News | Kannada News | Karnataka News Hubli News | News In Hubli | Local news

