Breaking News

ದೇವರ ಮೂರ್ತಿ ಭಗ್ನ :ಕಮಿಷನ‌ರ್ ಎನ್. ಶಶಿಕುಮಾರ್ ಭೇಟಿ

ಹುಬ್ಬಳ್ಳಿ: ದೇಶಪಾಂಡೆ ನಗರದ ಅಪರ್ಣಾ ಅಪಾರ್ಟೆಂಟ್ ನಲ್ಲಿನ ದೇವಸ್ಥಾನದಲ್ಲಿ ದತ್ತಾತ್ರೇಯ ದೇವರ ಮೂರ್ತಿಯನ್ನು ಭಗ್ನ ಗೊಳಿಸಿದ ಮಾಹಿತಿ ಬೆನ್ನಲ್ಲೇ ಕಮಿಷನ‌ರ್ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶನಿವಾರ ತಡರಾತ್ರಿ ಈ ಹೀನ ಕೃತ್ಯ ನಡೆದಿದೆ. ದೇವಸ್ಥಾನದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿಯ ನಾಲ್ಕು ಕೈಗಳನ್ನು ಮುರಿದಿದ್ದು, ಇಂದು ಬೆಳಿಗ್ಗೆ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿ ಸ್ಥಳದಲ್ಲಿ ಬಿದ್ದಿರುವ ರಾಡ್ ಹಾಗೂ ದೇವಸ್ಥಾನದ ಬಾಗಿಲಲ್ಲಿ ಮೂಡಿರುವ ದುಷ್ಕರ್ಮಿಗಳ ಬೆರಳಚ್ಚುಗಳನ್ನು ತಜ್ಞರು ಸಂಗ್ರಹ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಮಿಷನ‌ರ್ ಏರಿಯಾದ ಕಾರ್ಪೊರೇಟ‌ರ್ ಹಾಗೂ ಸ್ಥಳೀಯರಿಂದ ಪ್ರಮುಖ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ನವರಾತ್ರಿ ಹಬ್ಬದ ಪ್ರಯುಕ್ತ ಕಳೆದ ಮೂರು-ನಾಲ್ಕು ದಿನಗಳಿಂದ ಅಪಾರ್ಟೆಂಟ್ ನವರೆಲ್ಲ ಸೇರಿ ರಾತ್ರಿ 1.30ರ ವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡಾ ಮಾಡುತ್ತಿದ್ದಾರೆ. ಆದ್ರೆ ನಿನ್ನೆ ತಡರಾತ್ರಿ ನಡೆದ ಈ ಹೇಡಿತನದ ಕೃತ್ಯದಿಂದಾಗಿ ಆತಂಕ ನಿರ್ಮಾಣ ಆಗಿದ್ದು, ಪೊಲೀಸರು ಆದಷ್ಟು ಬೇಗ ಈ ಕಿರಾತಕರ ಹೆಡೆಮುರಿ ಕಟ್ಟಬೇಕಿದೆ.

Share News

About Shaikh BigTv

Check Also

ಜಮಖಂಡಿ ಅರಣ್ಯದಲ್ಲಿ ಕಾಡ್ಗಿಚ್ಚು- ನೂರಾರು ಎಕರೆ ಅರಣ್ಯ ಸುಟ್ಟು ಭಸ್ಮ

ಬಾಗಲಕೋಟೆ: ಜಮಖಂಡಿಯ ಶಾಂತಿನಗರದ ಸಮೀಪದ ಕಾಡಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು ಕಾಡ್ಗಿಚ್ಚು ವ್ಯಾಪಿಸಿದೆ. ಈ ಭೀಕರ ಘಟನೆಯಲ್ಲಿ ಹತ್ತು ಎಕರೆಗಿಂತಲೂ …

Leave a Reply

Your email address will not be published. Required fields are marked *