Breaking News

ಜಮ್ಮು ಕಾಶ್ಮೀರ ಚುನಾವಣಾ ಫಲಿತಾಂಶವು ಬಿಜೆಪಿಗೆ ಕಪಾಳಮೋಕ್ಷ ಆಗಿದೆ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಜಮ್ಮು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಹರಿಯಾಣದಲ್ಲಿ ಚುನಾವಣೋತ್ತರ ಸಮೀಕ್ಷೆ ಉಲ್ಟಾ ಆಗಿದ್ದು, ಬಿಜೆಪಿ ಅಭೂತಪೂರ್ವ ಗೆಲುವು ಗಳಿಸಿದೆ. ಇನ್ನು ಜಮ್ಮು-ಕಾಶ್ಮೀರದಲ್ಲಿ ಎನ್. ಸಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಜಮ್ಮು ಕಾಶ್ಮೀರ ಚುನಾವಣಾ ಫಲಿತಾಂಶದ ಕುರಿತಾಗಿ ಸಚಿವ ಪ್ರಿಯಾಂಕ್ ಖರ್ಗೆ ಈ ಒಂದು ಫಲಿತಾಂಶದಿಂದ ಬಿಜೆಪಿಗೆ ಕಪಾಳ ಮೋಕ್ಷ ಆಗಿದೆ ಎಂದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಮ್ಮು ಕಾಶ್ಮೀರ ರಿಸಲ್ಟ್ ನಿಂದ ಬಿಜೆಪಿಗೆ ಕಪಾಳ ಮೋಕ್ಷ ಆಗಿದೆ. 370 ವಿಧಿ ಬಗ್ಗೆ ಮಾತನಾಡಿದರು ಕಾಶ್ಮೀರ ಫೈಲ್ಸ್ ಫಿಲ್ಮ್ ಮಾಡಿದ್ರು. ಅದು ನಿರ್ಮಾಪಕ ಮತ್ತು ನಿರ್ದೇಶಕರಿಗೆ ಮಾತ್ರ ಲಾಭ ಆಗಿದ್ದು ಹೊರತು, ಇದರಿಂದ ಜಮ್ಮು ಕಾಶ್ಮೀರ ಜನರಿಗೆ ಏನು ಲಾಭ ಆಗಲಿಲ್ಲ. ಈಗ ಅಲ್ಲಿನ ಜನ ಒಂದು ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಬಿಜೆಪಿಯ ವಿಭಜನೆ ನೀತಿ ವರ್ಕ್ ಆಗ್ತಿಲ್ಲ ಎಂದು ಬೆಂಗಳೂರಿನಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ನೀಡಿದರು.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *