Breaking News

ತಮಿಳುನಾಡಿನಲ್ಲಿ ಅಣ್ಣಾಮಲೈ ಅವರಿಗೆ ಕಡಿವಾನ ಹಾಕಲು ಬಿಜೆಪಿ ಕೇಂದ್ರ ನಾಯಕತ್ವ ಮುಂದಾಗಿದೆ….

ಚೆನ್ನೈ: ತಮಿಳುನಾಡಿನಲ್ಲಿ ಅಣ್ಣಾಮಲೈ ಕಿರಿಕ್‌ ಮಾಡುತ್ತಿದ್ದಾರೆಂದು ಆರೋಪಿಸಿ ಬಿಜೆಪಿ ಜೊತೆಗಿನ ಸ್ನೇಹವನ್ನು ಎಐಎಡಿಎಂಕೆ ಮುರಿದುಕೊಂಡಿದೆ. ಅಣ್ಣಾಮಲೈ ಅವರು ಸುಖಾಸುಮ್ಮನೇ ತಮ್ಮ ಪಕ್ಷದ ಮಹಾನಾಯಕರ ವಿರುದ್ಧ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಎಐಎಡಿಎಂಕೆ ಆರೋಪಿಸಿದ್ದಾರೆ. ತಮಿಳುನಾಡಿನಲ್ಲಿ ಅಣ್ಣಾಮಲೈರನ್ನು ಕಂಟ್ರೋಲ್‌ ಮಾಡಲು ಬಿಜೆಪಿ ಹೈಕಮಾಂಡ್‌ ಮೆಗಾಪ್ಲ್ಯಾನ್‌ ಮಾಡಿದೆ.

ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರಿಗೆ ಕಡಿವಾಣ ಹಾಕಲು ಬಿಜೆಪಿ ಹೈಕಮಾಂಡ್‌ ಮುಂದಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಎಐಎಡಿಎಂಕೆ ಕಳೆದುಕೊಂಡಿರುವುದು ಬಿಜೆಪಿಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ. ಈ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರನ್ನು ದೆಹಲಿಗೆ ಕರೆಸಿರುವ ಬಿಜೆಪಿ ಹೈಕಮಾಂಡ್‌ ಹಲವು ಸುತ್ತಿನ ಮಾತುಕತೆ ನಡೆಸಿದೆ.
ತಮಿಳುನಾಡಿನಲ್ಲಿ ಅಣ್ಣಾಮಲೈ ಅವರಿಗೆ ಕಡಿವಾನ ಹಾಕಲು ಬಿಜೆಪಿ ಕೇಂದ್ರ ನಾಯಕತ್ವ ಮುಂದಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ತಮಿಳುನಾಡಿ ಉಸ್ತುವಾರಿ ನೀಡಲು ಬಿಜೆಪಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯ ಹಿರಿಯ ನಾಯಕಿ ನಿರ್ಮಲಾ ಸೀತಾರಾಮ್ ಅವರು ಮೂಲತಃ ತಮಿಳರು. ಈ ಹಿನ್ನೆಲೆ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

Share News

About BigTv News

Check Also

ರಮ್ಯಾ ಹೊಸಯುಗ ಪ್ರಾರಂಭ: ಸ್ಯಾಂಡಲ್ ವುಡ್ಗೆ ಕಾಲಿಡಲು ಮತ್ತೆ ಮನಸು ಮಾಡಿದ ರಮ್ಯಾ.

ಕಿಚ್ಚ ಸುದೀಪ್ ಮತ್ತು ರಮ್ಯಾ ಜೋಡಿ ಸ್ಯಾಂಡಲ್​ವುಡ್​ನ ಸೂಪರ್ ಡೂಪರ್ ಹಿಟ್ ಜೋಡಿಗಳಲ್ಲಿ ಒಂದು. ರಮ್ಯಾಗೆ ಮುಂಗಾರು ಮಳೆ ಡೈರೆಕ್ಟರ್​ …

Leave a Reply

Your email address will not be published. Required fields are marked *