ಕುಂದಗೋಳ : ಹೆಣ್ಣು ಮಗು ಹುಟ್ಟಿದ್ದೇ ಶಾಪ ಎಂಬ ಭಾವನೆ ತೊಡೆದು ಹೋಗಿದೆ ಹೆಣ್ಣು ಅನಾದಿಕಾಲದಿಂದಲೂ ಇಲ್ಲಿಯವರೆಗೆ ಪ್ರತಿ ರಂಗದಲ್ಲೂ ತನ್ನ ಔದಾರ್ಯ ತೋರಿದ್ದಾಳೆ ಎಂದು ಸಿವಿಲ್ ನ್ಯಾಯಾಧೀಶ ಗೌರವಾನ್ವಿತ ಶ್ರೀಮತಿ ಗಾಯತ್ರಿ ಅವರು ಹೇಳಿದರು.
ಅವರು ಕುಂದಗೋಳ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಯೋಜನಾಧಿಕಾರಿಗಳ ಕಾರ್ಯಾಲಯದ ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮದ ಅಂಗವಾಗಿ ಹೆಣ್ಣು ಮಗುವಿಗೆ ಜನ್ಮನೀಡಿದ ತಾಯಿಗೆ ಅಭಿನಂದನೆ ಸಲ್ಲಿಸಿ ತೆಂಗಿನ ಸಸಿ ನೀಡಿ ಬೆಳೆಸಲು ಪೋಷಣೆ ಮಾಡಲು ತಿಳಿಸಿದರು.
ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಯೋಜನಾಧಿಕಾರಿ ಶಾರಾದಾ ನಾಡಗೌಡರ ಮಾತನಾಡಿ ಹೆಣ್ಣು ಮಗುವಿಗೆ ನಮ್ಮ ಇಲಾಖೆಯಿಂದ ಅನೇಕ ಸೌಲಭ್ಯಗಳಿವೆ, ಅವುಗಳನ್ನು ಬಳಸಿಕೊಳ್ಳಿರಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಸಿಡಿಪಿಓ ಶಂಶಾದಬೇಗಂ ಕಂದಗಲ್, ಇಲಾಖೆ ಅಧಿಕಾರಿಗಳು ಮತ್ತು ಸಹ ಸಿಬ್ಬಂದಿಗಳು ನ್ಯಾಯಾಲಯದ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

