ಹುಬ್ಬಳ್ಳಿ: ಮೈಸೂರಿನ ದಸರಾ ಮಹೋತ್ಸವದ ಅಂಗವಾಗಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು, ಮೈಸೂರು-ಬೆಳಗಾವಿ-ಮೈಸೂರು (ರೈಲು ಸಂಖ್ಯೆ 17301/17302) ಡೈಲಿ ಎಕ್ಸ್‌ಪ್ರೆಸ್ ರೈಲುಗಳಿಗೆ ಈ ಕೆಳಗಿನ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ.
ಅಕ್ಟೋಬರ್ 9ರಿಂದ 13ರ ವರೆಗೆ ಮೈಸೂರಿನಿಂದ ಪ್ರಾರಂಭವಾಗುವ ಮೈಸೂರು-ಬೆಳಗಾವಿ (17301) ಡೈಲಿ ಎಕ್ಸ್‌ಪ್ರೆಸ್ ರೈಲು ಬೆಳಗುಳ, ಸಾಗರಕಟ್ಟೆ, ಹೊಸ ಅಗ್ರಹಾರ, ಅಕ್ಕಿಹೆಬ್ಬಾಳು, ಬೀರಹಳ್ಳಿ ಹಾಲ್ಟ್ ಮತ್ತು ಮಾವಿನಕೆರೆ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಯಾಗಲಿದೆ.
ಅಕ್ಟೋಬರ್ 11ರಂದು ಬೆಳಗಾವಿ ನಿಲ್ದಾಣದಿಂದ ಹೊರಡುವ ಬೆಳಗಾವಿ-ಮೈಸೂರು (17302) ಡೈಲಿ ಎಕ್ಸ್‌ಪ್ರೆಸ್ ರೈಲು ಮಾವಿನಕೆರೆ, ಬೀರಹಳ್ಳಿ ಹಾಲ್ಟ್, ಅಕ್ಕಿಹೆಬ್ಬಾಳು, ಹೊಸ ಅಗ್ರಹಾರ, ಸಾಗರಕಟ್ಟೆ ಮತ್ತು ಬೆಳಗುಳ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಯಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

