Breaking News

ಹನಿ ಟ್ರ್ಯಾಪ್ : ಖತರ್ನಾಕ್ ಜಾಲವನ್ನು ಬೇಧಿಸುವಲ್ಲಿ ಹುಬ್ಬಳ್ಳಿ ಪೋಲಿಸರು ಯಶಸ್ವಿ

ಹುಬ್ಬಳ್ಳಿ: ಫೋನ್ ಮೂಲಕ ಪರಿಚಯ ಮಾಡಿಕೊಂಡು ಅವರ ಜೊತೆ ನಯವಾಗಿ ಮಾತನಾಡಿ ಬುಟ್ಟಿಗೆ ಹಾಕಿಕೊಂಡು ಅವರ ಜೊತೆ ಏಕಾಂತದಲ್ಲಿ ಕಾಲವನ್ನು ಕಳೆದು ವಿಡಿಯೋ ಮಾಡಿಕೊಂಡು ಅದೇ ವಿಡಿಯೋ ಇಟ್ಟುಕೊಂಡು ಹನಿ ಟ್ರ್ಯಾಪ್ ಮಾಡುತ್ತಿದ್ದ ಖತರ್ನಾಕ್ ಜಾಲವನ್ನು ಬೇಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಚಗನ್ ಲಾಲ್ ಚೌಧರಿ ಎಂಬಾತನಿಗೆ ಫೋನ್ ಮೂಲಕ ಪರಿಚಯವಾದ ಮಹಿಳೆ ಆತನ ಜೊತೆ ಸಲುಗೆಯಿಂದ ಇದ್ದು ಆತನ ಜೊತೆ ಕಾಲ ಕಳೆದ ವಿಡಿಯೋಗಳನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಳು.ನಂತರ ತನ್ನ ಗ್ಯಾಂಗ್’ನ ನಾಲ್ಕು ಸದಸ್ಯರ ಸಹಾಯದಿಂದ ಪಾತ್ರೆ ವ್ಯಾಪಾರಿಯಾದ ಚಗನ್ ಲಾಲ್ ಚೌಧರಿಗೆ ಬ್ಲ್ಯಾಕ್ಕೇಲ್ ಮಾಡಲು ಶುರು ಮಾಡಿದಾಗ ಲಾಲ್ ಚೌಧರಿ ಅಶೋಕ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾನೆ.

ಹುಬ್ಬಳ್ಳಿಯ ಚಗನ್ ಲಾಲ್ ಚೌಧರಿ ಎಂಬಾತನಿಗೆ ಫೋನ್ ಮೂಲಕ ಪರಿಚಯವಾದ ಮಹಿಳೆ ಆತನ ಜೊತೆ ಸಲುಗೆಯಿಂದ ಇದ್ದು ಆತನ ಜೊತೆ ಕಾಲ ಕಳೆದ ವಿಡಿಯೋಗಳನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಳು.ನಂತರ ತನ್ನ ಗ್ಯಾಂಗ್‌’ನ ನಾಲ್ಕು ಸದಸ್ಯರ ಸಹಾಯದಿಂದ ಪಾತ್ರೆ ವ್ಯಾಪಾರಿಯಾದ ಚಗನ್ ಲಾಲ್ ಚೌಧರಿಗೆ ಬ್ಲ್ಯಾಕ್ಟೇಲ್ ಮಾಡಲು ಶುರು ಮಾಡಿದಾಗ ಲಾಲ್ ಚೌಧರಿ ಅಶೋಕ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾನೆ.

ಕೂಡಲೇ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಹನಿ ಟ್ರ್ಯಾಪ್‌ ನಡೆಸುತ್ತಿದ್ದ ಶಬಾನಾ ಬೇಗಂ,ಸಯೀದ್, ತೌಶೀಫ್‌,ಮೆಹಬೂಬ್ ಸಾಬ್, ಅಬ್ದುಲ್ ಹಾಗೂ ಪ್ರವೀಣ್ ಎಂಬುವರನ್ನು ಬಂಧನ ಮಾಡಿ ಐದು ಮೊಬೈಲ್‌,ಎರಡು ಬೈಕ್,9000 ಸಾವಿರ ನಗದು ವಶಕ್ಕೆ ಪಡೆದು ಆರೋಪಿಗಳನ್ನು ಕಂಬಿ ಹಿಂದೆ ತಳ್ಳಲಾಗಿದೆ ಎಂದು ಡಿಸಿಪಿ ನಂದಗಾವಿ ಹೇಳಿದ್ದಾರೆ.

Share News

About Shaikh BigTv

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *