Breaking News

ಜ.28 ರಿಂದ ಉತ್ತರಾಖಂಡ್ ದಲ್ಲಿ ರಾಷ್ಟ್ರೀಯ ಕ್ರೀಡೆಗಳು ಆರಂಭ

ನವದೆಹಲಿ: ಮುಂದಿನ (38ನೇ ಆವೃತ್ತಿಯ) ರಾಷ್ಟ್ರೀಯ ಕ್ರೀಡೆಗಳು ಉತ್ತರಾಖಂಡದಲ್ಲಿ ಜನವರಿ 28 ರಿಂದ ಫೆಬ್ರುವರಿ 14ರವರೆಗೆ ನಡೆಯಲಿವೆ ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಬುಧವಾರ ಪ್ರಕಟಿಸಿದೆ.
ವೇಳಾಪಟ್ಟಿಯು ಮುಂದಿನ ತಿಂಗಳ ಸಾಮಾನ್ಯಸಭೆಯಲ್ಲಿ ಸ್ಥಿರೀಕರಣ ಪಡೆಯಬೇಕಾಗಿದೆ ಎಂದು ಐಒಎ ಹೇಳಿದೆ.
ಸಂಸ್ಥೆಯ ಸಾಮಾನ್ಯ ಸಭೆ ಅಕ್ಟೋಬರ್ 25ರಂದು ನಿಗದಿಯಾಗಿದೆ. ರಾಷ್ಟ್ರೀಯ ಕ್ರೀಡೆಗಳನ್ನು ಉತ್ತರಾಖಂಡದಲ್ಲಿ ನಡೆಸಲು ಸಂತಸವಾಗುತ್ತಿದೆ. ಈ ರಾಜ್ಯವು ಈ ಪ್ರತಿಷ್ಠಿತ ಕ್ರೀಡೆಗಳ ಆತಿಥ್ಯ ವಹಿಸಲು ಉತ್ಸಾಹ ಮತ್ತು ಬದ್ಧತೆಯನ್ನು ತೋರಿಸಿದೆ ಎಂದು ಐಒಎ ಅಧ್ಯಕ್ಷೆ ಪಿ.ಟಿ.ಉಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರ ಜೊತೆಗೆ ಉತ್ತರಾಖಂಡವು, ರಾಷ್ಟ್ರೀಯ ಚಳಿಗಾಲದ ಕ್ರೀಡೆಗಳನ್ನು ನಡೆಸಲೂ ಆಸಕ್ತಿ ತೋರಿದೆ. ಈ ಬಗ್ಗೆ ಆ ರಾಜ್ಯದಿಂದ ಖಚಿತವಾದ ಪ್ರಸ್ತಾವ ಸ್ವೀಕರಿಸಲು ಕಾತರಳಾಗಿರುವುದಾಗಿ ಉಷಾ ತಿಳಿಸಿದ್ದಾರೆ.
ಕಳೆದ ಬಾರಿಯ ರಾಷ್ಟ್ರೀಯ ಕ್ರೀಡೆಗಳು ಗೋವಾದಲ್ಲಿ 2023ರ ಅಕ್ಟೋಬರ್‌ 25 ರಿಂದ ನವೆಂಬರ್‌ 9ರವರೆಗೆ ನಡೆದಿದ್ದವು. ಮಹಾರಾಷ್ಟ್ರ 80 ಚಿನ್ನ ಸೇರಿದಂತೆ 228 ಪದಕಗಳನ್ನು ಗೆದ್ದು ಪಾರಮ್ಯ ಮೆರೆದಿತ್ತು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *