Breaking News

ಭಾರಿ ಮಳೆಯಿಂದಾಗಿ ಜನರ ಜೀವನ ಅಸ್ತವ್ಯಸ್ತ

ಹುಬ್ಬಳ್ಳಿ: ಭಾರೀ ಮಳೆಯಿಂದಾಗಿ ಕೆಲವೊಂದು ಏರಿಯಾಗಳು ಕೆರೆಯಂತಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 32 ರಲ್ಲಿ ಬರುವ ಆನಂದ ನಗರದ ಗೌತಮ ಕಾಲೋನಿ, ಜೈ ಹನುಮಾನ್ ನಗರದಲ್ಲಿ ರಸ್ತೆ ಮೇಲೆ ನೀರು ಕೆರೆಯಂತೆ ನಿಂತಿದೆ. ಅಷ್ಟೇ ಅಲ್ಲೇ ಮನೆ ಒಳಗೆ ನೀರು ನುಗ್ಗಿದ್ದು ಇಲ್ಲಿನ ನಿವಾಸಿಗಳು ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದಾರೆ. ಹೀಗೆ ನೀರು ನಿಲ್ಲುವುದಕ್ಕೆ ಮುಖ್ಯ ಕಾರಣವೆಂದ್ರೆ ಸೂಕ್ತವಾದ ರಸ್ತೆ ಇಲ್ಲ, ಗಟಾರ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲ ಹೀಗೆ ಸಾಕಷ್ಟು ಸೌಕರ್ಯಗಳು ಇಲ್ಲದ ಕಾರಣ ಮಳೆ ನೀರು ರಸ್ತೆ ಮೇಲೆ, ಮನೆ ಒಳಗೆ ನುಗ್ಗುತ್ತಿದೆ.

ನಿನ್ನೆ ಸಾಯಂಕಾಲದಿಂದ ಸಾಕಷ್ಟು ಪ್ರಮಾಣದಲ್ಲಿ ಮಳೆ ಬಂದಿದೆ. ಇಲ್ಲಿನ ನಿವಾಸಿಗಳ ಗೋಳಾಟ ಹೇಳತೀರದಾಗಿದೆ. ಈ ಭಾಗದ ಶಾಸಕ ಅರವಿಂದ ಬೆಲ್ಲದ್, ಮತ್ತು ವಾರ್ಡ್ ಸದಸ್ಯ ಸತೀಶ್ ಹಾನಗಲ್ ಇವರ ಕಣ್ಣಿಗೆ ಈ ಜ್ವಲಂತ ಸಮಸ್ಯೆಗಳು ಕಂಡು ಬಂದಿಲ್ವೆ? ಇಂತಹ ಪರಿಸ್ಥಿತಿಯಲ್ಲಿ ಜನರು ಹೇಗೆ ನೆಮ್ಮದಿಯಾಗಿರಬೇಕು ನೀವೆ ಹೇಳಿ. ಕೂಡಲೇ ಈ ಸಮಸ್ಯೆಯನ್ನು ಬಗೆ ಹರಿಸಿ ಇಲ್ಲಿನ ನಿವಾಸಿಗಳಿಗೆ ನೆಮ್ಮದಿಯಾಗಿ ಜೀವನ ಮಾಡಲು ಅನುಕೂಲ ಮಾಡಿಕೊಡಬೇಕಾಗಿದೆ.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *