ಕುಂದಗೋಳ : ತಾಲೂಕಿನಲ್ಲಿ ಬುಧವಾರ ರಾತ್ರಿಯಿಂದ ಇಂದು ಬೆಳಿಗ್ಗೆವರೆಗೂ ಸುರಿದ ಧಾರಾಕಾರ ಮಳೆಗೆ ರೈತಾಪಿ ಜನ ಕಿತ್ತು ಕೈ ಬಿಟ್ಟ ಶೇಂಗಾ, ಸೋಯಾಬಿನ್ ಸೇರಿದಂತೆ ಹತ್ತಿ ಬೆಳೆ ಸಂಪೂರ್ಣ ಜಲಾವೃತವಾಗಿವೆ.
ಇನ್ನೂ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಕೆರೆ ಕಾಲುವೆ ಒಡೆದು ಅಕ್ಕಪಕ್ಕದ ಹೊಲಗಳಿಗೆ ರಭಸದಿಂದ ನೀರು ನುಗ್ಗಿದ ಪರಿಣಾಮ ಬೆಳೆ ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿವೆ. ಸದ್ಯ ನೀರಿನ ವೇಗ ಹೆಚ್ಚುತ್ತಿರುವ ಕಾರಣ ರೈತಾಪಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
11 ಎಕರೆ ವಿಸ್ತೀರ್ಣದ ಕೆರೆಗೆ ನೀರು ರಭಸದಿಂದ ನುಗ್ಗುವ ವೇಳೆಗೆ ಕಾಲುವೆ ಒಡೆದು 7 ಎಕರೆ 1 ಗುಂಟೆ ವಿಸ್ತೀರ್ಣದ ಹೊಲದಲ್ಲಿ ಬೃಹತ್ ಕಾಲುವೆ ಆಕಾರದಲ್ಲಿ ನೀರು ರಭಸದಿಂದ ಹರಿದು ಬೆಳೆ ನಷ್ಟವಾಗಿದೆ. ಒಟ್ಟಾರೆ ವರುಣನ ಅಟ್ಟಹಾಸಕ್ಕೆ ರೈತಾಪಿ ಜನರು ಅಕ್ಷರಶಃ ಕಂಗಾಲಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಕೃಷಿ ಇಲಾಖೆ ಮತ್ತು ಬೆಳೆ ವಿಮೆ ಕಂಪನಿಗಳು ರೈತರತ್ತ ಧಾವಿಸಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

