Breaking News

ಗವಿ ಸಿದ್ದೇಶ್ವರ ಸ್ವಾಮೀಜಿ ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್‌ ಠಾಣೆಗೆ ಭೇಟಿ

ಹುಬ್ಬಳ್ಳಿ: ಕೊಪ್ಪಳದ ಗವಿ ಸಿದ್ದೇಶ್ವರ ಸ್ವಾಮೀಜಿ ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಪೊಲೀಸ್ ಠಾಣೆಯ ಆವರಣದಲ್ಲಿ ಬೆಳೆದ ಉದ್ಯಾನವನದ ಮಾಹಿತಿಯನ್ನು ಇನ್ಸೆಕ್ಟರ್ ರಾಘವೇಂದ್ರ ಹಳ್ಳೂರ್ ಅವರಿಂದ ಪಡೆದರು.

ಬೇರೆ ಕಾರ್ಯ ನಿಮಿತ್ತ ಹುಬ್ಬಳ್ಳಿಗೆ ಆಗಮಿಸಿದ ಕೊಪ್ಪಳದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ ಕಸಬಾಪೇಟ ಪೊಲೀಸ್‌ ಠಾಣೆಯ ಮುಂದೆ ಹೋಗುವಾಗ ಠಾಣೆಯ ಮುಂಭಾಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರೋದನ್ನು ನೋಡಿ ಪೊಲೀಸ್‌ ಠಾಣೆಗೆ ಭೇಟಿಯನ್ನು ನೀಡಿದರು.

ಇದುವರೆಗೂ ಒಂದು ಬಾರಿಯೂ ಪೊಲೀಸ್‌ ಠಾಣೆಗೆ ಕಾಲನ್ನು ಸಹ ಇಡದ ಸ್ವಾಮೀಜಿ ಇಂದು ಏಕಾಏಕಿ ಕಸಬಾಪೇಟ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಅಚ್ಚರಿಗೊಳಿಸಿದರು. ಸಾಮಾನ್ಯವಾಗಿ ಪೊಲೀಸ್‌ ಠಾಣೆ ಎಂದರೆ ಗುಜರಿ ವಸ್ತುಗಳ ಅಡ್ಡೆಯಾಗಿರುತ್ತೆ. ಆದ್ರೆ ಈ ಪೊಲೀಸ್ ಠಾಣೆ ಮಾತ್ರ ವಿಭಿನ್ನವಾಗಿದೆ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಇನ್ಸೆಕ್ಟ‌ರ್ ರಾಘವೇಂದ್ರ ಹಳ್ಳೂರ್ ಸ್ವಾಮೀಜಿಗಳಿಗೆ ಸಸಿಯನ್ನು ಉಡುಗೊರೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿ ಸ್ವಾಮೀಜಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಯನ್ನು ಪಟ್ಟರು.

Share News

About Shaikh BigTv

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *