ಕಾಸರಗೋಡು (ಬದಿಯಡ್ಕ): ಇನ್‌ಸ್ಟ್ರಾಗ್ರಾಂನಲ್ಲಿ ಕಮೆಂಟ್ ಮಾಡಿದ ದ್ವೇಷದಿಂದ ಬದಿಯಡ್ಕ ವಳಮಲೆ ನಿವಾಸಿ ಧವನೀಶ್(18), ಸ್ನೇಹಿತರಾದ ತನ್ಮಯ್ ಮತ್ತು ಶ್ರೇಯಸ್ ಅವರಿಗೆ ತಂಡವೊಂದು ತಡೆದು ನಿಲ್ಲಿಸಿ ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ.ಈ ಸಂಬಂಧ ನಾಸಿರ್, ಸಾಬಿತ್, ಸಿರಾಜ್, ರಿಯಾಸ್, ಅನ್ನಾಶಾ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ ಐದು ಮಂದಿಯ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಶನಿವಾರ ರಾತ್ರಿ ಬದಿಯಡ್ಕ ಪೇಟೆಯ ಹೊಟೇಲೊಂದರ ಪರಿಸರದಲ್ಲಿ ಹಲ್ಲೆ ಮಾಡಲಾಗಿದೆ. ಗೋಳಿಯಡಿಯಲ್ಲಿ ಘಟನೆ
ಗೋಳಿಯಡಿಯಲ್ಲಿ ನೆಟ್ಟಣಿಗೆ ಹೌಸ್‌ನ ಮುಹಮ್ಮದ್ ಅಲಿ, ಸಿರಾಜ್, ಸಾಬಿತ್, ಹನಾನ್ ಹಾಲ್, ನಾಸಿರ್ ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕದ ಭರತ್ ಶೆಟ್ಟಿ, ಹರೀಶ್, ಧನ್ವಿತ್, ಮಹೇಶ್, ಅಕ್ಷಯ್, ಶ್ರೇಯಸ್, ರೂಪೇಶ್, ರಂಜಿತ್ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

