ಕುಂದಗೋಳ : ಐಕ್ಯೂಎಸಿ ಯುವ ರೆಡ್ ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೋಟರಿ ಕ್ಲಬ್ ಮಿಡ್’ಟೌನ್ ಧಾರವಾಡದ ಸಹಯೋಗದೊಂದಿಗೆ ಕುಂದಗೋಳ ಪಟ್ಟಣದ ಜೆ.ಎಸ್.ಎಸ್ ವಿದ್ಯಾಪೀಠದ ಜಿ.ಎಸ್.ಪಾಟೀಲ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನೂ ಪ.ಪೂ.ಶಿವಾನಂದ ಮಹಾ ಸ್ವಾಮೀಜಿ ಹಾಗೂ ಕಲ್ಯಾಣಪುರಮಠದ ಬಸವಣ್ಣ ಅಜ್ಜ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಜೆ.ಎನ್. ಆರಿಕಟ್ಟಿ ರಕ್ತದಾನದ ಮಹತ್ವ ಪ್ರಯೋಜನ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ವೀರೇಶ ಕುನ್ನೂರ ರಕ್ತದಾನದ ಕುರಿತು ಪ್ರಾಸ್ಥಾವಿಕ ನುಡಿದರು. ಕಾರ್ಯದರ್ಶಿ ಮೆಗುಂಡಿ, ಎಂ.ಎಂ. ಎಸ್.ಬಿ.ಹಿರೇಮಠ, ವೈ.ಎಸ್. ಬುಡಶೆಟ್ಟಿ, ವೈದ್ಯಾಧಿ ಕಾರಿ ಡಾ.ಮಹಮ್ಮದ ಸೊಹಿಲ್, ಡಾ.ಪಂಕಜ್, ವೀರೇಶ ಕುನ್ನೂರ್ ಆಗಮಿಸಿದ್ದರು.
ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬೋಧಕ ಬೋಧ ಕೇತರ ಸಿಬ್ಬಂದಿ ರಕ್ತದಾನ ಮಾಡಿದರು. ಪ್ರೊ.ಎಂ.ಸಿ.ಶಿಗ್ಲಿ ನಿರೂಪಿಸಿದರು. ಎಂ.ಸಿ. ಅಂಗಡಿ ಸ್ವಾಗತಿಸಿದರು. ಎಸ್. ಎಸ್.ಪಾಟೀಲ ವಂದಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

