Breaking News

ಬೈಕ್‌ಗೆ ಬಸ್ ಡಿಕ್ಕಿ : ಸವಾರಿಬ್ಬರಿಗೆ ಗಂಭೀರ ಗಾಯ

ಕುಂದಗೋಳ: ದೇವಸ್ಥಾನಕ್ಕೆ ಹೋಗಿ ವಾಪಾಸ್‌ ಮನೆಗೆ ತೆರಳುತ್ತಿದ್ದ ಬೈಕ್‌ಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದ, ಘಟನೆ ರಾಮಗಿರಿ ಬಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ ಲಕ್ಷೇಶ್ವರ ರಾಜ್ಯ ಹೆದ್ದಾರಿಯ ರಾಮಗಿರಿ ಬಳಿಯಲ್ಲಿ ಲಕ್ಷ್ಮೀಶ್ವರ ಪಟ್ಟಣದ ಲಕ್ಷ್ಮಣ ಗೌಡನಾಯ್ಕ‌ರ್, ನೀಲಪ್ಪ ಎಂಬಾತರೇ ಗಾಯಗೊಂಡಿದ್ದಾರೆ.

ಇವರು ನವರಾತ್ರಿ ನಿಮಿತ್ತ ರಾಮಗಿರಿಯ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ, ಪುನಃ ರಸ್ತೆ ಎಡಬದಿಯಲ್ಲಿ ಲಕ್ಷ್ಮೀಶ್ವರಕ್ಕೆ ತೆರಳುತ್ತಿದ್ದ ವೇಳೆ ತಕ್ಷಣ ಬೈಕ್ ಬಲಬದಿಗೆ ತೆಗೆದುಕೊಂಡ ವೇಳೆ ಸಾರಿಗೆ ಬಸ್‌ ಡಿಕ್ಕಿ ಪಡಿಸಿದೆ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.

ಅಪಘಾತದ ಪರಿಣಾಮ ಬೈಕ್ ಸವಾರರ ತಲೆಗೆ ಗಾಯಗಳಾಗಿದ್ದು, ಬಳಿಕ ಸ್ಥಳೀಯರ ಸಹಾಯದಿಂದ ಗಾಯಗೊಂಡವರನ್ನು ಲಕ್ಷ್ಮೀಶ್ವರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಲಕ್ಷ್ಮೀಶ್ವರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Share News

About Shaikh BigTv

Check Also

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹50,000 ದಂಡ ವಿಧಿಸಿದ ಮಂಗಳೂರು ಕೋರ್ಟ್!

ಮಂಗಳೂರು: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ …

Leave a Reply

Your email address will not be published. Required fields are marked *