Breaking News

ಟ್ರಂಪ್​ ವಿರುದ್ಧ ಸಿಡಿದೆದ್ದ ಪಾಕ್​ ಪ್ರಧಾನಿ ಇಮ್ರಾನ್.

ಇಸ್ಲಾಮಬಾದ್​: ಪಾಕಿಸ್ತಾನ ಕೇಡು ಬಗೆಯುವ ಕೆಲಸ ಮಾಡಬಾರದು ಅಂತಾ ಕಿಡಿಕಾರಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿರುದ್ಧ ಪಾಕ್ ಪ್ರಧಾನಿ ಇಮ್ರಾನ್​ ಖಾನ್ ಸರಣಿ ಟ್ವೀಟ್​ ವಾರ್ ನಡೆಸಿದ್ದಾರೆ. ಈಗಾಗಲೇ ವಾಷ್ಟಿಂಗ್ಟನ್ ಮತ್ತು ಇಸ್ಲಾಮಾಬಾದ್​ ನಡುವಿನ ಸಂಬಂಧ ಹಳಸಿದೆ. ಪಾಕ್​ ಮತ್ತು ಅಫ್ಘಾನಿಸ್ತಾನದ ಮೇಲೆ ಉಗ್ರರು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಉಗ್ರರಿಗೆ ಯಾರು ಸಹಾಯ ಮಾಡುತ್ತಿದ್ದಾರೆ ಅಂತ ಗೊತ್ತಿದೆ. ಪಾಕಿಸ್ತಾನವನ್ನು ದೂಷಿಸಲು ನಿಮ್ಮ ಬಳಿ ನಿಖರವಾದ ದಾಖಲೆಗಳಿವೆಯೇ ಅಂತಾ ಇಮ್ರಾನ್ ಖಾನ್ ಪ್ರಶ್ನಿಸಿದ್ದಾರೆ.9/11 ರಂದು ನಡೆದ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿಲ್ಲ. ಆದ್ರೆ ಪಾಕ್​ ಅಮೆರಿಕಾ ಯುದ್ಧದಲ್ಲಿ ಭಾಗವಹಿಸಿತ್ತು. ಆ ಯುದ್ಧದಲ್ಲಿ 75,000 ಸಾವು ನೋವುಗಳು ಸಂಭವಿಸಿದ್ದವು. ಅಷ್ಟೇ ಅಲ್ಲದೇ ಆ ಯುದ್ಧ್ದದಿಂದ 123 ಬಿಲಿಯನ್ ಡಾಲರ್​ ಆರ್ಥಿಕ ನಷ್ಟವುಂಟಾಯಿತು. ಆದ್ರೆ, ಅಮೆರಿಕಾ ಕೇವಲ 20 ಬಿಲಿಯನ್ ಡಾಲರ್​ ಕೊಟ್ಟು ಕೈ ತೊಳೆದುಕೊಂಡಿತು ಅಂತಾ ಇಮ್ರಾನ್ ಖಾನ್ ಟ್ರಂಪ್ ವಿರುದ್ಧ ಕಿಡಿಕಾರಿದ್ದಾರೆ.ಟ್ರಂಪ್​ ಹೇಳಿದ್ದೇನು..?ಭಯೋತ್ಪಾದನೆ ನಿರ್ಮೂಲನೆಗಾಗಿ ಪಾಕ್​ಗೆ ವರ್ಷಕ್ಕೆ 1.3 ಬಿಲಿಯನ್ ಡಾಲರ್​ ಅಮೆರಿಕಾ ನೀಡುತ್ತಿತ್ತು. ಟೆರರಿಸ್ಟ್​ ಒಸಾಮಾ ಬಿನ್​ ಲಾಡೆನ್ ಪಾಕಿಸ್ತಾನದ ಬಂಗಲೆಯೊಂದರಲ್ಲಿ ವಾಸ ಮಾಡ್ತಿದ್ದ ವಿಷಯ ಪಾಕಿಸ್ತಾನದಲ್ಲಿ ಬಹುಜನರಿಗೆ ತಿಳಿದಿತ್ತು. ನಮ್ಮಿಂದ ಸಹಾಯ ಪಡೆದುಕೊಂಡು ನಮಗೆ ಕೇಡು ಬಗೆಯುವಂತಹ ಕೆಲಸ ಪಾಕಿಸ್ತಾನ ಮಾಡುತ್ತಿತ್ತು ಅಂತಾ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದರು.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *