Breaking News

ಪಾಕಿಸ್ತಾನದಲ್ಲಿ ಭೀಕರ ಪ್ರವಾಹ : 1000ಕ್ಕೂ ಅಧಿಕ ಜನರು ಸಾವು



ಪಾಕಿಸ್ತಾನದಲ್ಲಿ ಭೀಕರ ಪ್ರವಾಹ ಪರಿಸ್ಥಿತಿಯಿಂದ 1000ಕ್ಕೂ ಅಧಿಕ ಜನರು ಮೃತಪಟ್ಟಿದ್ದು, ರಕ್ಷಣಾ ಕಾರ್ಯ ನಡೆಸಲು ಹೆಲಿಕಾಫ್ಟರ್‌ ಇಳಿಯಲೂ ಜಾಗವಿಲ್ಲದಷ್ಟು ಪ್ರವಾಹದ ನೀರು ದೇಶವನ್ನು ಆವರಿಸಿಕೊಂಡಿದೆ.

ಮೂರು ದಶಕಗಳಲ್ಲೇ ಕಂಡು ಕೇಳರಿಯದ ಭಾರೀ ಮಳೆಯಿಂದ ಪಾಕಿಸ್ತಾನದಲ್ಲಿ ಪ್ರವಾಹ ಉಂಟಾಗಿದ್ದು, ಸುಮಾರು ೧ ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.
30 ಲಕ್ಷಕ್ಕೂ ಅಧಿಕ ಜನರು ಸ್ಥಳಾಂತರಗೊಂಡಿದ್ದಾರೆ.

ಪಾಕಿಸ್ತಾನದ ಬಹುತೇಕ ಜಿಲ್ಲೆಗಳು ದ್ವೀಪದಂತಾಗಿವೆ. ರಕ್ಷಣೆಗೆ ಹೊರಟ ಹೆಲಿಕಾಫ್ಟರ್‌ ಗಳು ಇಳಿಯಲು ಒಣ ಪ್ರದೇಶ ಇಲ್ಲದೇ ಪರದಾಡುತ್ತಿವೆ ಎಂದು ಸ್ಥಳೀಯ ವರದಿಗಾರರು ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ನಾಗರಿಕರ ರಕ್ಷಣೆಗೆ ನೌಕಾಪಡೆ ಇಳಿದಿದೆ. ತಕ್ಷಣಕ್ಕೆ ರಕ್ಷಣಾ ಕಾರ್ಯ ಕಷ್ಟವಾಗಿದೆ. ಆರ್ಥಿಕತೆ ಮೇಲೂ ದುಷ್ಪರಿಣಾಮ ಬೀರಿದ್ದು, ಸುಮಾರು 1 ಲಕ್ಷ ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹಣಕಾಸು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

Share News

About BigTv News

Check Also

ಅಯ್ಯೋ ಪಾಪ ಅಂದಿದ್ದೇ ತಪ್ಪಾಯ್ತು: ಎಂಬಿಬಿಎಸ್ ವಿದ್ಯಾರ್ಥಿನಿ ಸ್ನೇಹಿತೆಯ ಸೋಗಿನಲ್ಲಿ ಒಂದು ಲಕ್ಷ ರೂ. ವಂಚನೆ!

ವಿದೇಶದಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯ ಕಾಲೇಜು ಶುಲ್ಕ ಪಾವತಿಸುವ ತುರ್ತು ಪರಿಸ್ಥಿತಿಯನ್ನು ಬಳಸಿಕೊಂಡು ಸೈಬರ್ ವಂಚಕರು ಬೆಂಗಳೂರಿನ ಕುಟುಂಬವೊಂದಕ್ಕೆ …

Leave a Reply

Your email address will not be published. Required fields are marked *