Breaking News

ಭಾರೀ ಮಳೆಯಿಂದಾಗಿ ಟೊಮೆಟೊ ಬೆಲೆ ಕುಸಿತ

ಚಿಕ್ಕಬಳ್ಳಾಪುರ: ರಾಜ್ಯದೆಲ್ಲೆಡೆ ವರುಣಾರ್ಭಟ ಜೋರಾಗಿದೆ ಈ ಬಿಟ್ಟೂಬಿಡದ ಜಿಟಿ ಜಿಟಿ ಮಳೆಯಿಂದ ಕೆಂಪು ಸುಂದರಿ ಟೊಮೆಟೊಗೆ ಕಂಟಕ ಎದುರಾಗಿದ್ದು ಟೊಮೇಟೊ ಬೆಲೆ ಕುಸಿದಿದೆ. ಮೂರು ದಿನಗಳ ಹಿಂದೆ 15 ಕೆಜಿಯ ಒಂದು ಬಾಕ್ಸ್ ಟೊಮೇಟೊ ಬೆಲೆ ಸಾವಿರ ರೂಪಾಯಿ ಇತ್ತು. ಆದರೆ ಈಗ ದಿಢೀರ್ ಬೆಲೆ ಕುಸಿದಿದ್ದು 15 ಕೆಜಿಯ ಒಂದು ಬಾಕ್ಸ್ ಟೊಮೇಟೊ ಬೆಲೆ 250 ರೂಪಾಯಿಗೆ ಆಗಿದೆ. ಮಳೆಯಿಂದ ಟೊಮೆಟೊ ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಾಟವಾಗದ ಕಾರಣ ಚಿಕ್ಕಬಳ್ಳಾಪುರದ ಎಪಿಎಂಸಿ ಟೊಮೆಟೊ ಮಾರುಕಟ್ಟೆಯಲ್ಲಿ ಟೊಮೆಟೊ ಕೇಳುವವರೇ ಇಲ್ಲದಂತಾಗಿದೆ.
ಮಳೆಯಿಂದ ವಿವಿಧ ರಾಜ್ಯಗಳಿಗೆ ಟೊಮೇಟೊ ಎಕ್ಸಪೋರ್ಟ್ ಆಗ್ತಿಲ್ಲ ದಿಢೀರ್ ಬೆಲೆ ಕುಸಿದಿದೆ. ಮಳೆಯಿಂದ ಹಣ್ಣುಗಳು ಹಾಳಾಗುತ್ತಿರುವ ಹಿನ್ನಲೆ ಖರೀದಿದಾರರು ಬರ್ತಿಲ್ಲ ಎಂದು ರೈತರೊಬ್ಬರು ಕಣ್ಣೀರು ಹಾಕಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *