Breaking News

ನವದಂಪತಿ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ…

ಬೆಂಗಳೂರು: ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇವನಹಳ್ಳಿ ತಾಲೂಕಿನ ಬಿಜ್ಜವಾರ ಗ್ರಾಮದಲ್ಲಿ ನಡೆದಿದೆ. ವಿಜಯಪುರ ಪಟ್ಟಣದ ನಿವಾಸಿ ರಮೇಶ್ (28) ಹಾಗು ಸಹನಾ (26) ಸಾವಿಗೆ ಶರಣಾದವರು.

ಪ್ರೀತಿಸಿ ಮನೆಯವರ ವಿರೋಧದ ನಡುವೆ ಇವರು ಮದುವೆಯಾಗಿದ್ದರು. ವಿವಾಹವಾಗಿ ಪ್ರತ್ಯೇಕ ಮನೆ ಮಾಡಿಕೊಂಡಿದ್ದರು. ರಮೇಶ್ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ದಿನದ ಹಿಂದೆ ಬಿಜ್ಜವಾರ ಗ್ರಾಮದ ಸಂಬಂಧಿಕರ ಮನೆಗೆ ಇಬ್ಬರೂ ಬಂದಿದ್ದರು. ರಾತ್ರಿ ಮನೆಯಿಂದ ಹೊರಟವರು ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳೀಯರ ಸಹಾಯದಿಂದ ಪೊಲೀಸರು ನೀರಿ‌ನಲ್ಲಿದ್ದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ದೇವನಹಳ್ಳಿ ತಹಶೀಲ್ದಾರ್ ಭೇಟಿ‌ ನೀಡಿ, ಪರಿಶೀಲನೆ ನಡೆಸಿದ್ದಾರೆ.

Share News

About BigTv News

Check Also

ಕರ್ತವ್ಯ ಆ್ಯಪ್‌ಗೆ ಖಾಕಿ ಕಿಡಿ..! | 24×7 ಡ್ಯೂಟಿ ಪೊಲೀಸರಿಗೆ ಹೊಸ ಹಾಜರಾತಿ ತಲೆನೋವುಹಾಜರಾತಿ ಕಡ್ಡಾಯಕ್ಕೆ ಪೊಲೀಸರ ವಿರೋಧ..!

ಕರ್ತವ್ಯ ಆ್ಯಪ್‌ಗೆ ಪೊಲೀಸರ ನೋ ಎಂಟ್ರಿ! | ಖಾಕಿಗೆ ಹೊಸ ರೂಲ್ಸ್‌ ಮೇಲೆ ಆಕ್ರೋಶ… ಖಾಕಿಗೆ ಕರ್ತವ್ಯ ಆ್ಯಪ್ ಶಾಕ್! …

Leave a Reply

Your email address will not be published. Required fields are marked *