Breaking News

ಅಮರಾವತಿ ರಾಜಧಾನಿಯನ್ನಾಗಿ ಅಭಿವೃದ್ದಿಪಡಿಸುವ ಕಾಮಗಾರಿ ಪುನರಾರಂಭಿಸಿದ ಚಂದ್ರಬಾಬು ನಾಯ್ಡು

ಅಮರಾವತಿ: ಅಮರಾವತಿಯನ್ನು ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವ ರಾಜಧಾನಿ ವಲಯ ಅಭಿವೃದ್ಧಿ ಪ್ರಾಧಿಕಾರ (ಸಿಆರ್‌ಡಿಎ) ಯೋಜನೆಯ ಕಾಮಗಾರಿಗಳನ್ನು ‌ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಇಂದು ಪುನರಾರಂಭಿಸಿದ್ದಾರೆ.
ಈ ಹಿಂದಿನ ವೈ.ಎಸ್‌.ಆರ್‌.ಕಾಂಗ್ರೆಸ್ ಸರ್ಕಾರವು, ಅಮರಾವತಿಯನ್ನು ರಾಜಧಾನಿಯನ್ನಾಗಿ ನಿರ್ಮಾಣ ಮಾಡುವ ಅವರ ಕನಸಿನ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಐದು ವರ್ಷಗಳ ಬಳಿಕ ರಾಜಧಾನಿ ಪ್ರದೇಶದ ರಾಯಪುಡಿ ಗ್ರಾಮದಲ್ಲಿ ಕಾಮಗಾರಿಗಳನ್ನು ಪುನರಾರಂಭಿಸಲಾಗಿದೆ.
2014-2019ರ ತಮ್ಮ ಹಿಂದಿನ ಅವಧಿಯಲ್ಲಿ ₹160 ಕೋಟಿ ವೆಚ್ಚದಲ್ಲಿ 7 ಅಂತಸ್ತಿನ ಕಚೇರಿ ಕಟ್ಟಡವನ್ನು ಸಿಆರ್‌ಡಿಎ ಯೋಜನೆಯಡಿ ಪ್ರಾರಂಭಿಸಿದ್ದರು. ಆದರೆ, 2019 ಮತ್ತು 2024ರ ನಡುವೆ, ವೈ.ಎಸ್. ಜಗನ್ ಮೋಹನ್ ರೆಡ್ಡಿ ಸರ್ಕಾರವು ಮೂರು ರಾಜಧಾನಿ ಮಾಡುವುದಾಗಿ ಹೇಳಿ ಅಮರಾವತಿಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರಲಿಲ್ಲ.
2024ರ ಚುನಾವಣೆಯ ಬಳಿಕ ರಾಜ್ಯದ ಮುಖ್ಯಮಂತ್ರಿಯಾಗಿ ನಾಯ್ಡು ಎರಡನೇ ಬಾರಿ ಅಧಿಕಾರ ವಹಿಸಿಕೊಂಡರು ಬಳಿಕ, ಅಮರಾವತಿ ರಾಜಧಾನಿ ಯೋಜನೆಗೆ ಹೊಸ ಉತ್ತೇಜನ ದೊರೆಯಿತು.
ಅಕ್ಟೋಬರ್ 16 ರಂದು ನಡೆದ ಸಿಆರ್‌ಡಿಎ ಅಧಿಕಾರಿಗಳ ಸಭೆಯಲ್ಲಿ ಅಮರಾವತಿಯಲ್ಲಿ ಕಾಮಗಾರಿಗಳನ್ನು ಮರುಪ್ರಾರಂಭಿಸುವ ನಿರ್ಣಯ ಕೈಗೊಳ್ಳಲಾಗಿದೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *