ರಾಯಚೂರು: ಜಿಲ್ಲೆಯ ಸಿಂಧನೂರಿನ ಸಿಎಸ್‌ಎಫ್ ಚರ್ಚ್ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರರು ಸವಾರರು ಮೃತಪಟ್ಟ ಘಟನೆ ಇಂದು (ಅ.25) ನಡೆದಿದೆ.
ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಶೆಕ್ಷಾವಲಿ (19) ಮೃತಪಟ್ಟಿದ್ದು, ಮತ್ತೋರ್ವ ಮೃತ ಬೈಕ್ ಸವಾರನ ಹೆಸರು ತಿಳಿದು ಬಂದಿಲ್ಲ.
ತಾಲೂಕಿನ ದುಮುತಿ ಗ್ರಾಮದಿಂದ ಸಿಂಧನೂರಿನ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿ, ಜವಳಗೆರಾದಿಂದ ಜಮೀನಿಗೆ ಹೊರಟಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಎರಡೂ ಬೈಕುಗಳ ಮುಂಭಾಗ ನಜ್ಜುಗುಜ್ಜಾಗಿದೆ. ಎರಡೂ ಶವಗಳನ್ನು ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ ಬಳಗಾನೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

