Breaking News

ಕೆಲಸ ಮಾಡುತ್ತಿದ್ದ ಹೋಟೆಲ್ ಗೆ ಕನ್ನ ಹಾಕಿದ ಭೂಪ

ಹುಬ್ಬಳ್ಳಿ: ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಅಡುಗೆಯಾಳು, ಹೋಟೆಲ್ ನಲ್ಲಿನ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಶಾಂತಿನಗರದ ಟೇಸ್ಟಿ ಟಿಫಿನ್ಸ್ ನಲ್ಲಿ ಕಳ್ಳತನವಾಗಿದ್ದು, ಅಡುಗೆಯಾಳು ಶಂಭು ಮುದ್ದೆಗೌಡ‌ರ್ (28) ಎಂಬಾತನೇ ಚೋರ ಶಿಖಾಮಣಿ.

ಇನ್ನು ಕಳೆದ ಒಂದು ವಾರದಿಂದ ಹೋಟೆಲ್ ನ್ನು ಬಂದ್ ಮಾಡಲಾಗಿತ್ತು. ಈ ವೇಳೆ ಅಡುಗೆಯಾಳು ಶಂಭು, ಹೋಟೆಲ್ ನಲ್ಲಿದ್ದ ಕುಕ್ಕರ್, ಗ್ಯಾಸ್, ಫ್ರಿಡ್ಜ್, ಹೆಂಚು, ಹೀಟ‌ರ್ ಮೆಷಿನ್‌, ಡ್ರೈಂಡರ್ ಮತ್ತಿತರ ವಸ್ತುಗಳನ್ನು ಗೂಡ್ಸ್ ವಾಹನದಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾನೆ!

ಈ ಚಾಲಾಕಿ ಅಡುಗೆಯಾಳಿನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಬಡಪಾಯಿ ಹೋಟೆಲ್ ಮಾಲೀಕ ಅಭಿಷೇಕ್ ಅವರು ಹುಬ್ಬಳ್ಳಿ ಪೊಲೀಸರ ಮೊರೆ ಹೋಗಿದ್ದಾರೆ.

Share News

About Shaikh BigTv

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *