ಬೆಳಗಾವಿ:ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲಾಕ್ಕೆ ಕ್ರೂಸರ್ ವಾಹನ ಬಿದ್ದಿದು, 7 ಜನರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ದಾರುಣ ಘಟನೆ ತಾಲೂಕಿನ ಕಣಬರಗಿ ಸಮೀಪ ನಡೆದಿದೆ.
ದಿನಗೂಲಿ ಕೆಲಸಕ್ಕೆಂದು ಗೋಕಾಕ್ ತಾಲೂಕಿನ ಅಕ್ಕತಂಗಿಯರ ಹಾಳ ಗ್ರಾಮದಿಂದ ಬೆಳಗಾವಿಗೆ ಬರುತ್ತಿದ್ದಾಗ ಬೆಳಿಗ್ಗೆ 7.30ರ ಸುಮಾರಿಗೆ ಘಟನೆ ನಡೆದಿದೆ. ಬೆಳಗಾವಿಗೆ ಬರುತ್ತಿದ್ದಾಗ. ಮಾರಿಹಾಳ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡುತ್ತಿದ್ದಾರೆ.

ರೈಲು ಹಳಿ ಜೋಡಣೆ ಕೆಲಸಕ್ಕೆ ಒಟ್ಟು 18 ಜನರು ಬೆಳಗಾವಿಗೆ ಆಗಮಿಸುತ್ತಿದ್ದರು. ಭೀಮಶಿ ಕುಂದರಗಿ ಎಂಬುವವರು ವಾಹನ ಚಲಾಯಿಸುತ್ತಿದ್ದು, ಕಲ್ಯಾಳ ಪುಲ್ ಬಳಿ ಕ್ರೂಸರ್ ನಿಯಂತ್ರಣ ತಪ್ಪಿದೆ. ಈ ವೇಳೆ ಸ್ಥಳದಲ್ಲೇ 7ಜನ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಮೂವರನ್ನೂ ಸ್ಥಳೀಯರು, ಪೊಲೀಸರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸ್ಥಳಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಭೇಟಿ ನೀಡಿದ್ದು, ಘಟನೆ ಕುರಿತು ಮಾಹಿತಿ ಪಡೆದರು. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





