ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಸಿದ್ದಾರೂಢರ ನಗರದಲ್ಲಿರುವ ರೇವಣಸಿದ್ದೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ, 2 ನೇ ಶಾಲೆಗೆ ಬಣ್ಣ ಹಚ್ಚುವ ಮಹತ್ತರ ಕಾರ್ಯವನ್ನು ಮಾಡಿದ್ದಾರೆ.
ಈ ಕನ್ನಡ ಶಾಲೆಯಲ್ಲಿ ಅದೆಷ್ಟೋ ಮಕ್ಕಳು ಓದುತ್ತಿದ್ದಾರೆ. ಈಗ ಆ ಶಾಲೆ ಬಣ್ಣದಿಂದ ಕಂಗೊಳಿಸಿದ್ದನ್ನು ನೋಡಿ ಮಕ್ಕಳು ಖುಷಿ ಖುಷಿಯಿಂದ ಶಾಲೆಗೆ ಹೋಗುತ್ತಿದ್ದಾರೆ. ಈ ಹಳೆ ವಿದ್ಯಾರ್ಥಿ ಸಂಘದ ಇಂತಹ ಒಳ್ಳೆಯ ಕೆಲಸಕ್ಕೆ ಹುಬ್ಬಳ್ಳಿ ಧಾರವಾಡ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

