ಧಾರವಾಡ: ಮನೆಯ ಹೊರಗಡೆ ಇಟ್ಟಿದ್ದ ಬೂಟಿನೊಳಗೆ ಮಿಡಿ ನಾಗರವೊಂದು ಅವಿತು ಕುಳಿತು ಕೆಲಕಾಲ ಆತಂಕ ಸೃಷ್ಟಿಸಿತ್ತು. ಈ ಘಟನೆ ಧಾರವಾಡ ಹೊಸಯಲ್ಲಾಪುರದ ಮೇದಾರ ಓಣಿಯಲ್ಲಿ ನಡೆದಿದೆ.
ನಂದಿತಾ ಶಿವನಗೌಡರ ಎಂಬುವವರ ಮನೆಯ ಮುಂದೆ ಇಟ್ಟಿದ್ದ ಬೂಟಿನಲ್ಲಿ ಮಿಡಿನಾಗರ ಅವಿತು ಕುಳಿತಿತ್ತು. ಕಸ ಗೂಡಿಸುವ ಸಂದರ್ಭದಲ್ಲಿ ಅದನ್ನು ನೋಡಿದ ಮನೆಯವರು ಕೂಡಲೇ ಉರಗ ತಜ್ಞ ಯಲ್ಲಪ್ಪ ಜೋಡಳ್ಳಿ ಅವರಿಗೆ ಮಾಹಿತಿ ಮುಟ್ಟಿಸಿದ್ದರು. ಸ್ಥಳಕ್ಕೆ ಬಂದ ಯಲ್ಲಪ್ಪ ಮಿಡಿ ನಾಗರ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ಶೂ ಒಳಗಡೆ ಅವಿತು ಕುಳಿತಿದ್ದ ನಾಗರ ಹಾವನ್ನು ನೋಡದೇ ಶೂ ಹಾಕಿಕೊಂಡಿದ್ದರೆ ಅನಾಹುತ ಸಂಭವಿಸುತ್ತಿತ್ತು. ಹಾವುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನೂ ಸಹ ಯಲ್ಲಪ್ಪ ಮೂಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





