Breaking News

ಶಾಸಕ ನಾರಾಯಣಗೌಡ ಮೇಲೆ ಮಲ್ಲೇಶ ಕಿಡಿ

ಮಂಡ್ಯ : ಜಿಲ್ಲೆಯ ಕೆ. ಆರ್. ಪೇಟೆ ಶಾಸಕ ನಾರಾಯಣಗೌಡ ಅವರು ಪಕ್ಷದ್ರೋಹಿಯಾಗಿದ್ದು, ತಮ್ಮನ್ನೇ ನಂಬಿದ್ದ ಜೆಡಿಎಸ್ ಪಕ್ಷದ ಸಾವಿರಾರು ನಿಷ್ಠಾವಂತ ಕಾರ್ಯಕರ್ತರನ್ನು ಅನಾಥರನ್ನಾಗಿ ಮಾಡಿ ಕೈಕೊಟ್ಟು ಹೋಗಿದ್ದಾರೆ ಎಂದು ಜೆಡಿಎಸ್ ಯುವಮುಖಂಡ ಹಾಗೂ ಎಪಿಎಂಸಿ ನಿರ್ದೇಶಕರಾದ ಐನೋರಹಳ್ಳಿ ಮಲ್ಲೇಶ್ ಕಿಡಿ ಕಾರಿದ್ದಾರೆ.ಬಿಜೆಪಿ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡು ತಾಲ್ಲೂಕಿನ ಜನತೆ ನೀಡಿದ ಅತ್ಯಮೂಲ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ಬಂಧಿಯಾಗಿದ್ದಾರೆ. ಪಕ್ಷವನ್ನು ಹಾಗೂ ಕಾರ್ಯಕರ್ತರನ್ನು ಅನಾಥರನ್ನಾಗಿ ಮಾಡಿ ಹೋಗುತ್ತಿರುವ ಶಾಸಕರು ಗೌರವಯುತವಾಗಿ ಜಾಗ ಖಾಲಿ ಮಾಡಬೇಕೇ ಹೊರತು..ತಾವು ಶಾಸಕರಾಗಲು ಕಾರಣರಾದ ಡಾ.ಅನುಸೂಯಮ್ಮ ಮತ್ತು ಬಸ್ ಕೃಷ್ಣೇಗೌಡ ಅವರನ್ನೇ ನಿಂಧಿಸಿ, ಸುಳ್ಳು ಆರೋಪ ಮಾಡುತ್ತಿರುವ ಶಾಸಕ ನಾರಾಯಣಗೌಡರು ತಮ್ಮ ವಯಕ್ತಿಕ ಸ್ವಾರ್ಥ ಸಾಧನೆ ಹಾಗೂ ಹಣದಾಸೆಗಾಗಿ ಜಾಗ ಖಾಲಿ ಮಾಡುತ್ತಿದ್ದಾರೆ. ಉಂಡ ಮನೆಗೆ ದ್ರೋಹ ಮಾಡಿ, ತಾಲ್ಲೂಕಿನ ಜನತೆಗೆ ಅಪಮಾನ ಮಾಡಿರುವ ಶಾಸಕರು ವಯಕ್ತಿಕ ನಿಂಧನೆ ಮಾಡುವುದನ್ನು ನಿಲ್ಲಿಸದಿದ್ದರೆ, ತಾಲ್ಲೂಕಿನ ಜನರು ಹಾಗೂ ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಬಲಿಯಾಗಬೇಕಾಗುತ್ತದೆ ಎಂದು ಎಪಿಎಂಸಿ ನಿರ್ದೇಶಕ ಐನೋರಹಳ್ಳಿ ಮಲ್ಲೇಶ್ ಆಕ್ರೋಶ ವ್ಯಕ್ತಪಡಿಸಿದರು…

Share News

About admin

Check Also

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರೀ ಅಗ್ನಿ ಅವಘಡ – ಮೆಟ್ರೋ ಕಾಂಪ್ಲೆಕ್ಸ್‌ನಲ್ಲಿ ಲಕ್ಷಾಂತರ ನಷ್ಟ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು ಭಾರೀ ಅಗ್ನಿ ಅವಘಡ ಸಂಭವಿಸಿದೆ. ಮರಾಠ ಗಲ್ಲಿಯಲ್ಲಿರುವ ಮೆಟ್ರೋ ಕಾಂಪ್ಲೆಕ್ಸ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ …

Leave a Reply

Your email address will not be published. Required fields are marked *