ಹುಬ್ಬಳ್ಳಿ: ಬೆಂಗಳೂರಲ್ಲಿ ಮೂರು ದಿನದಿಂದ ಖಾದ್ರಿ ನನ್ನ ಜೊತೆಗೆ ಇದ್ದಾರೆ. ಟಿಕೆಟ್ ಕೊಟ್ಟಿಲ್ಲ ಅಂತ ಎಲ್ಲೋ ಒಂದು ಕಡೆ ಅಸಮಾಧಾನ ಇತ್ತು. ಅಭಿಮಾನಿಗಳು ನಾಮಪತ್ರ ಕೊಡಲೇಬೇಕು ಅಂತ ಮಾಡಿಸಿದ್ದಾರೆ. ಈಗ ಒಪ್ಪಿಕೊಂಡು ನಾಳೆ ನಾಮಪತ್ರ ಹಿಂದೆ ಪಡೆಯುತ್ತಾರೆಂದು ಹುಬ್ಬಳ್ಳಿಯಲ್ಲಿ ಸಚಿವ ಜಮೀರ್ ಅಹ್ಮದ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಖಾದ್ರಿ ನಾಲ್ಕು ಬಾರಿ ಸೋತಿದ್ದಾರೆ. ಕಳೆದ ಬಾರಿ ಪಠಾಣ್‌ಗೆ ಕೊಟ್ಟಿದ್ವಿ. ಸಿಂಪತಿ ಇದೆ ಅಂತ ಕೊಡಿ ಅಂದ್ರು ಕೊಡೋಕೆ ಆಗಿಲ್ಲ. ಕಾಂಗ್ರೆಸ್ ಪಕ್ಷ ಗೆಲ್ಲಿಸಲು ಪಣ ತೊಟ್ಟಿದ್ದೇನೆ ಅಂತ ಅವರೇ ಸ್ವಇಚ್ಛೆಯಿಂದ ನಾಮಪತ್ರ ಹಿಂದೆ ಪಡೆಯುತ್ತಿದ್ದಾರೆ. ಟಿಕೆಟ್ ಕೇಳೋದು ತಪ್ಪೇನಿಲ್ಲ, ಸಿಕ್ಕಿಲ್ಲ ಅಷ್ಟೇ. ಟಿಕೆಟ್ ವಿಚಾರ ಹೈಕಮಾಂಡ್ ನಿರ್ಧಾರ ಮಾಡುತ್ತೆ. ನೂರಕ್ಕೆ ನೂರು ಶಿಗ್ಗಾಂವಿಯಲ್ಲಿ ನಾವೇ ಗೆಲೀವಿ ಎಂದ ಜಮೀರ್ ಅಹ್ಮದ್.
bigtvnews | Hubli Dharwad News | Kannada News | Karnataka News Hubli News | News In Hubli | Local news

