Warning: Undefined array key "wpdb" in /home/eamphica/public_html/wp-content/mu-plugins/blaze-curator-hq.php on line 4442
ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ.. - bigtvnews | Hubli Dharwad News | Kannada News | Karnataka News
Breaking News

ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ..

ನವದೆಹಲಿ: ರೋಜ್​ಗಾರ್​ ಮೇಳದ ಮೂಲಕ ಇಂದು ಪ್ರಧಾನಿ ನರೇಂದ್ರ ಮೋದಿ ವಿವಿಧ ಕೇಂದ್ರ ಸರ್ಕಾರದ ಹುದ್ದೆಗಳಿಗೆ ಹೊಸದಾಗಿ ನೇಮಕಗೊಂಡ 70 ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದರು. ದೇಶಾದ್ಯಂತ 44 ಸ್ಥಳಗಳಲ್ಲಿ ಈ ವರ್ಚುಯಲ್​ ನೇಮಕಾತಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಅವರು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಸಾರ್ವಜನಿಕ ಬ್ಯಾಂಕ್​ಗಳು ಸಾವಿರಾರು ಕೋಟಿ ನಷ್ಟವನ್ನು ಹೊಂದಿದ್ದವು ತಿಳಿದಿದ್ದವು. ಆದರೆ ಈಗ ಅವು ಅನುತ್ಪಾದಕ ಆಸ್ತಿಗಳು (ಎನ್​ಪಿಎ) ದಾಖಲೆಯ ಲಾಭಗಳಿಗೆ ಹೆಸರುವಾಸಿಯಾಗಿವೆ. ಹಿಂದಿನ ಸರ್ಕಾರದಲ್ಲಿ ನಡೆದ ದೊಡ್ಡ ಹಗರಣದಲ್ಲಿ ಒಂದು ಫೋನ್​ ಬ್ಯಾಂಕಿಂಗ್​ ಹಗರಣವಾಗಿದೆ. ಈ ಮೂಲಕ ನಿರ್ದಿಷ್ಟ ಕುಟುಂಬದ ಆಪ್ತರು ಸಾವಿರಾರು ಕೋಟಿ ಸಾಲ ಪಡೆದರು. ಇದು ದೇಶದ ಬ್ಯಾಂಕಿಂಗ್​ ವ್ಯವಸ್ಥೆಯನ್ನು ಹಾಳು ಮಾಡಿತು ಎಂದು ಟೀಕಿಸಿದರು

ಇದೀಗ ಈ ಪರಿಸ್ಥಿತಿಗಳು ಬದಲಾವಣೆಯಾಗಿದ್ದು, ಕ್ಷೇತ್ರದಲ್ಲಿ ಸಕಾರಾತ್ಮಕ ವಾತಾವರಣ ಕಂಡು ಬಂದಿದೆ. ಈ ಜಾಗತಿಕ ನಂಬಿಕೆ ಮತ್ತು ಆಕರ್ಷಣೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

Share News

About BigTv News

Check Also

ಸಂಪುಟ ಪುನಾರಚನೆ: ಸಲೀಮ್ ಮಹಮದ್ ಹೇಳಿಕೆ….

ಮಗುವಿನ ಮನಸ್ಸಿನ, ಸಬ್ಯ ನಾಯಕ ಸಲೀಂ ಅಹ್ಮದ್ ಗೆ ಸಚಿವ ಸ್ಥಾನ ಪಕ್ಕಾ!!! ಉ-ಕ ಅಲ್ಪಸಂಖ್ಯಾತ ನಾಯಕರ ಕೋಟಾದಡಿ ಸಚಿವ …

Leave a Reply

Your email address will not be published. Required fields are marked *