Breaking News

ರಾಜಕೀಯಕ್ಕೆ ಬಂದು ಯಾರಾದರೂ ಜಾತಿ ಮಾಡಿದ್ರೆ, ಅವನು ನಾಲಾಯಕ್ ವ್ಯಕ್ತಿ: ಜಮೀ‌ರ್ ಅಹಮ್ಮದ್

ಹುಬ್ಬಳ್ಳಿ: ಮುಜರಾಯಿ ಬೇರೆಯಲ್ಲ ವಕ್ಷ ಬೇರೆಯಲ್ಲ, ನಾವು ಅಲ್ಲಾ ಅಂತೇವೆ, ನೀವು ದೇವರಂತಿರಿ ಅಷ್ಟೇ, ನಾನು ಮುಸ್ಲಿಂ ಆಗುವುದಕ್ಕಿಂತ ಮುಂಚೆ ನಾನೊಬ್ಬ ಭಾರತೀಯ, ಯಾರೂ ತಾಯಿಯ ಹೊಟ್ಟೆಯಲ್ಲಿ ಕೇಳಿ ಹುಟ್ಟಲ್ಲ, ರಾಜಕೀಯಕ್ಕೆ ಬಂದು ಯಾರಾದರೂ ಜಾತಿ ಮಾಡಿದ್ರೆ, ಅವನು ನಾಲಾಯಕ್ ವ್ಯಕ್ತಿ ಎಂದು ಸಚಿವ ಜಮೀ‌ರ್ ಅಹಮ್ಮದ್ ಪ್ರತಿಕ್ರಿಯಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ‘ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ’ ಅಂತ ನಮ್ಮ ಇಸ್ಲಾಂ ಹೇಳಿಕೊಟ್ಟಿದೆ. ಅನಧಿಕೃತವಾಗಿ ಏನಾದರೂ ನೋಟಿಸ್‌ ಕೊಟ್ಟಿದ್ರೆ ಅದನ್ನ ಈಗಲೇ ನಿಲ್ಲಿಸುತ್ತೇವೆ, ಕ್ರಮ ಕೈಗೊಳ್ಳುತ್ತೇವೆ ಎಂದರು.

ವಕ್ಷ ಜಮೀನು ವಿವಾದ ವಿಚಾರಕ್ಕೆ ಬಿಜೆಪಿ ಅವರು ಈ ರೀತಿ ರಾಜಕೀಯ ಮಾಡಬಾರದು. ವಿಜಯಪುರದಲ್ಲಿ ರೈತರ 1,200 ಎಕರೆ ವಕ್ಷ ತೆಗೆದುಕೊಳ್ಳೋಕೆ ಹೊರಟ್ಟಿದ್ದಾರೆ ಅಂತಾರೆ, ಇರೊದೇ 11 ಎಕರೆ 1,200 ಎಕರೆ ಎಲ್ಲಿಂದ ಬರುತ್ತೆ..? ಸರ್ಕಾರದಿಂದ ಒಂದು ಇಂಚು ಜಾಗ ತೆಗೆದುಕೊಂಡಿಲ್ಲ. ದಾನಿಗಳು 1,12,000 ಎಕರೆ ದಾನ ಮಾಡಿದ್ದಾರೆ.

ಅದರಲ್ಲಿ ಉಳಿದುಕೊಂಡಿರುವುದು 12,000 ಮಾತ್ರ, ಅದನ್ನಾದರೂ ಉಳಿಸಿಕೊಳ್ಳುವ ಅಂತ ವಕ್ಷ ಅದಾಲತ್ ಮಾಡಿದ್ದೇನೆ. ಒಟ್ಟು 11 ಜಿಲ್ಲೆಗಳಲ್ಲಿ ಮಾಡಿದ್ದೇನೆ. ವಕ್ಷ ಅದಾಲತ್ ಮಾಡಿದ ನಂತರ ಅಧಿಕಾರಿಗಳ ಸಭೆ ಮಾಡುತ್ತೇವೆ.

ರೈತರ ಆಸ್ತಿ ತೆಗೆದುಕೊಳ್ಳೋಕೆ ಸಾಧ್ಯನಾ..? ರೈತರ ಆಸ್ತಿಯಂತೂ ಮುಟ್ಟೋಕೆ ಆಗಲ್ಲ, ಇದೆಲ್ಲವೂ ರಾಜಕೀಯ ಪಿತೂರಿಯಿಂದ ನಡೆಯುತ್ತಿದೆ. ಬೇರೆಯವರ ಆಸ್ತಿಯನ್ನ ತೊಗೊಳಕ್ಕೆ ನಾವ್ಯಾರು.? ನಮಗೆ ಅನ್ನ ಹಾಕುವ ಅನ್ನದಾತರು ಅವರ ಆಸ್ತಿಯನ್ನು ಮುಟ್ಟೋಕಾಗುತ್ತ, ಸಮಾಜಕ್ಕೆ ಒಳ್ಳೆಯದಾಗಲಿ ಅಂತ ದಾನಿಗಳು ದಾನ ಮಾಡಿದಂತಹ ಆಸ್ತಿ ಅದು ಎಂದರು.

Share News

About Shaikh BigTv

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *