ಬೀದರ್: ವರದಕ್ಷಿಣೆ ಕಿರುಕುಳದಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತಿ, ಅತ್ತೆ ಮತ್ತು ಮಾವನಿಗೆ ತಲಾ 7 ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ ಬೀದರ್ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಜೊತೆಗೆ ಐಪಿಸಿ 306ರಡಿ 5 ವರ್ಷ ಜೈಲು ಹಾಗೂ ತಲಾ ₹10 ಸಾವಿರ ದಂಡವೂ ವಿಧಿಸಲಾಗಿದೆ. ಭಾಲ್ಕಿ ತಾಲೂಕಿನ ಕಳಸದಾಳ ಗ್ರಾಮದ ಸುಮಯ್ಯ ಅವರು 2024ರ ಏಪ್ರಿಲ್‌ನಲ್ಲಿ ನೇಣು ಬಿಗಿದು ಮೃತಪಟ್ಟಿದ್ದರು. ಮದುವೆಯಾದ ಬಳಿಕ ವರದಕ್ಷಿಣೆ ವಿಚಾರವಾಗಿ ಪತಿ ಸಜ್ಜದ್ ಬಾಬು ಪಟೇಲ್ ಹಾಗೂ ಆತನ ಪೋಷಕರು ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣದ ತನಿಖೆ ಬಳಿಕ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದು, ವರದಕ್ಷಿಣೆ ಕಿರುಕುಳವೇ ಸಾವಿಗೆ ಕಾರಣ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

