Breaking News
Featured Video Play Icon

ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆಗೆ ಹಾಜರಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್

ಹುಬ್ಬಳ್ಳಿ : ಒಳಗಡೆ ಏನ ಪ್ರಶ್ನೆ ಕೇಳಿದಾರೇ ಏನ ಉತ್ತರ ಕೊಟ್ಟೀದಾರೆ ಅನ್ನೋದು ಅವರಿಗೆ ಮಾತ್ರ ಗೊತ್ತು.ಅದರ ಬಗ್ಗೆ ನಿಮಗೇನು ಗೊತ್ತು . ವಾಪಸ್ ವಿಚಾರಣೆಗೆ ಕರೀಬಹುದು ಎಂದು ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆಗೆ ಹಾಜರಾದ ವಿಚಾರಕ್ಕೆ
ಡಿಸಿಎಮ್ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಲೋಕಾಯುಕ್ತರ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿದಾರಾ ಅನ್ನೋ ಹೇಳಿಕೆಗೆ ಡಿಕೆ ಗರಂ ಆಗಿದ್ದಾರೆ. ಗೌರವ ಕೊಟ್ಟು ಲೋಕಾಯುಕ್ತ ಕಚೇರಿಗೆ ಸಿಎಮ್ ಹಾಜರಾಗಿದ್ದರೆ. ಗೌರವಾನ್ವಿತ ಮುಖ್ಯಮಂತ್ರಿಗಳಿದಾರೆ ಅನ್ನೋದಕ್ಕೆ ನೀವೆಲ್ಲ‌ಖುಷಿ ಪಡಬೇಕು.ಲೋಕಾಯುಕ್ತರನ್ನು ನೇಮಕ ಮಾಡಿದ್ದು ಬಿಜೆಪಿ ಕಾಲದಲ್ಲಿ.ಅಶೋಕ ಮ್ಯಾಚ್ ಫಿಕ್ಸಿಂಗ್ ಪದ ಬಳಕೆ ಮಾಡಿದ್ದು ನ್ಯಾಯಾಲಯಕ್ಕೆ ನ್ಯಾಯಾಲಾಯದ ಪೀಠಕ್ಕೆ ಮಾಡಿರೋ ಅವಮೌನ..ನ್ಯಾಯಾಲಯಗಳ ಮೇಲೆ ಆ ರೀತಿ ಮಾಡಿರೋದು ದೊಡ್ಡ ಅಪಮಾನ. ರಾಜಕಾರಣಿಗಳು ನೇಮಕ ಮಾಡಿರೋ ಪೋಸ್ಟ್ ಅಲ್ಲ ಅದು.ಸಂವಿಧಾನ ನೇಮಕ ಮಾಡಿರೋದು,ಲೋಕಾಯುಕ್ತ ಅಧಿಕಾರಿಗಳು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದ ಎಂದರು.

ಉಪಚುನಾವಣೆ ಹಿನ್ನಲೆ ಇಂದು ಶಿಗ್ಗಾಂವಿ ಗೆ ಹೋಗತೀದ್ದೇನೆ.ಇಗಾಗಲೇ ಸಂಡೂರ,ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿದ್ದೇನೆ..ಮೂರು‌ ಕ್ಷೇತ್ರದಲ್ಲಿ ಒಳ್ಳೆ ವಾತಾವರಣ ಇದೆ..ರಾಜ್ಯದ ಆಡಳಿತ ಜನ ನೋಡಿದ್ದಾರೆ.ಮೂರು ಕ್ಷೇತ್ರದಲ್ಲಿ ಅಭ್ಯರ್ಥಿ ಗಳಿದ್ದಾರೆ..ಶಿಗ್ಗಾಂವಿ ಯಲ್ಲಿ ನಾನು ಕಾರ್ಯಕರ್ತರ ಜೊತೆ ಚರ್ಚೆ ಮಾಡಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ನಮಗೆ ಲೀಡ್ ಬಂದಿದೆ.
ನಾನು ಶಿಗ್ಗಾಂವಿ ಗೆಲ್ತೀವಿ.ಬೊಮ್ಮಾಯಿ ವಿರುದ್ದ ಆಕ್ರೋಶ ಇದೆಯಂತೆ..ಕಾರ್ಯಕರ್ತರಿಗೆ ಸೀಟ್ ಕೊಡ್ತೀನಿ ಅಂದು ಕೊಟ್ಟಿಲ್ಲವಂತೆ.ಹೀಗಾಗಿ ನಾವ ಗೆಲ್ತೀವಿ ಎಂದ ಡಿಕೆ.ಬೆಳಗಾವಿಯಲ್ಲಿ SDA ಆತ್ಮಹತ್ಯೆ ಪ್ರಕರಣ. ಸಚಿವರ ಆಪ್ತರಾಗಲಿ ಯಾರೇ ಆಗಲಿ ಕ್ರಮ ಆಗತ್ತೆ.ಚುನಾವಣೆ ಸಮಯದಲ್ಲಿ ಈ ತರಹದ ಆರೋಪ ಇರೋದೆ .ಕೆಲವರು ಚುನಾವಣೆ ಸಂದರ್ಭಗಳಲ್ಲಿ ಇಂತಹದ್ದು ತರ್ತಾರೆ..ಕಾನೂನಿನ ಪ್ರಕಾರ ತನಿಖೆ ಆಗತ್ತೆ ಎಂದರು.

Share News

About Shaikh BigTv

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *