Breaking News

ಕೋಲಾರ: ಭೂ ದಾಖಲೆ ಡಿಜಿಟಲೀಕರಣ ವ್ಯವಸ್ಥೆಗಾಗಿ ಅಭಿಲೇಖಾಲಯವನ್ನು ಉದ್ಘಾಟಿಸಿದ ಸಚಿವ ಬೈರತಿ ಸುರೇಶ್

ಕೋಲಾರ: ನಗರದ ತಾಲ್ಲೂಕು ಕಚೇರಿಯಲ್ಲಿ ಡಿಜಿಟಲೀಕರಣ ವ್ಯವಸ್ಥೆಗಾಗಿ ‘ಅಭಿಲೇಖಾಲಯ’ವನ್ನು ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಸೋಮವಾರ ಉದ್ಘಾಟಿಸಿದರು.
ತ್ವರಿತಗತಿಯಲ್ಲಿ ಸೇವೆ ಒದಗಿಸಲು, ದಾಖಲೆಗಳನ್ನು ರಕ್ಷಿಸಿಡಲು ಕಂದಾಯ ಇಲಾಖೆಯು ‘ಭೂ ಸುರಕ್ಷಾ’, ‘ಭೂ ದಾಖಲೆಗಳ ಇ-ಖಜಾನೆ’ ವ್ಯವಸ್ಥೆ ಮೂಲಕ ತಾಲ್ಲೂಕು ಕಚೇರಿ, ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ ವ್ಯವಸ್ಥೆ ಜಾರಿ ಮಾಡುತ್ತಿದೆ.
ಹಳೆಯ ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿ ದಾಖಲೆಗಳಾಗಿ ಪರಿವರ್ತನೆಯಾಗಲಿದ್ದು, ರೆಕಾರ್ಡ್ ರೂಂಗಳಿಂದ ಪಡೆದುಕೊಳ್ಳಲು ಇರುವ ತೊಂದರೆಗಳ ನಿವಾರಣೆ ಸೇರಿದಂತೆ ಹಳೆಯ ದಾಖಲೆಗಳ ಸಂರಕ್ಷಣೆ ಹಾಗೂ ಕಳುವಾಗಲು, ತಿದ್ದಲು ಅಸಾಧ್ಯವಾಗಲಿದೆ. ಶಾಶ್ವತವಾಗಿ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಡಿಜಿಟಲೀಕರಣ ಮಾಡಲಾಗುತ್ತಿದೆ. ನೇರವಾಗಿ ಡಿಜಿಟಲ್ ಮಾಧ್ಯಮದಿಂದ ಭೂ ದಾಖಲೆಗಳನ್ನು ಪಡೆದುಕೊಳ್ಳುವ ಸೌಲಭ್ಯವಿದೆ.
ಕೋಲಾರ ತಾಲ್ಲೂಕಿನಲ್ಲಿ ಏಳು ಹೋಬಳಿಗಳು, 365 ಗ್ರಾಮಗಳಿವೆ. 53 ಗ್ರಾಮಗಳ ಪೈಕಿ ಕೈಬರಹದ ಪಹಣಿಗಳ ಸ್ಕ್ಯಾನಿಂಗ್‌ ಕಾರ್ಯ ಮುಗಿದಿರುತ್ತದೆ. 78,716 ಭೂ ಮಂಜೂರಾತಿ, ಭೂ ಸುಧಾರಣೆ ಸೇರಿ ಕಂದಾಯ ಇಲಾಖೆ ಕಡತಗಳನ್ನು ಎ, ಬಿ, ಸಿ, ಡಿ, ಇ ಯಂತೆ ವರ್ಗವಾರು ಕ್ಯಾಟಲಾಗ್‌ ಮಾಡಲಾಗಿದೆ. ಇನ್ನೂ 10.77 ಲಕ್ಷ ಪುಟಗಳ ಡಿಜಿಟಲೀಕರಣ ಬಾಕಿ ಇದೆ ಎಂದು ಸಚಿವರು, ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಏಕರೂಪ್ ಕೌರ್‌, ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ (ಕೋಲಾರ), ಕೆ.ಎಂ.ಶಾಂತರಾಜು (ಕೆಜಿಎಫ್‌), ಉಪವಿಭಾಗಾಧಿಕಾರಿ ಎಚ್‌.ಎಸ್‌.ವೆಂಕಟಲಕ್ಷ್ಮಿ, ತಹಶೀಲ್ದಾರ್‌ ಹರ್ಷವರ್ಧನ್‌ ಇದ್ದರು.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *