ಹುಬ್ಬಳ್ಳಿ: ಹಿಜಾಬ್ ಪ್ರಕರಣದಲ್ಲಿ ಭಾಗಿಯಾದ ಕಾರಣ ಉಡುಪಿ ಪ್ರಾಂಶುಪಾಲ ರಾಮಕೃಷ್ಣ ಅವರ ಹೆಸರನ್ನು ಸರ್ಕಾರ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿಯಿಂದ ಕೈಬಿಟ್ಟಿದ ವಿಚಾರ, ಒಬ್ಬರು ಉತ್ತಮ ಶಿಕ್ಷಕರು ಅಂದರೆ ಅವರು ಉತ್ತಮ ಶಿಕ್ಷಕರೇ.
ಶಿಕ್ಷಕರ ವೈಯಕ್ತಿಕ ವಿಚಾರ ಇಟ್ಟುಕೊಂಡು ಪ್ರಶಸ್ತಿಯಿಂದ ಹೊರಗಿಟ್ಟಿರುವುದು ಸರಿಯಲ್ಲ. ಈ ಹಿಂದಿನಿಂದಲೂ ಕಾಂಗ್ರೆಸ ವೈಯಕ್ತಿಕ ನಂಬಿಕೆಯ ಮೇಲೆ ಪ್ರಶಸ್ತಿ ನೀಡುತ್ತಾ ಬಂದಿದೆ. ಮೊದಲಿನಿಂದಲೂ ಕಾಂಗ್ರೆಸ್ ಲೇಫ್ಟಿಸ್ಟ್ ಪರ ಇದೆ ಎಂದು ವಿಪ ಪಕ್ಷದ ಉಪಾಧ್ಯಕ್ಷ ಅರವಿಂದ ಬೆಲ್ಲದ ಹೇಳಿದರು.
ಇನ್ನು ಭಾರತದ ಸಂಸ್ಕ್ರತಿ ಆಚಾರ ವಿಚಾರ ವಿರೋಧಿಸುವವರ ಪರವೇ ಕಾಂಗ್ರೆಸ್ ಇರುತ್ತೆ. ದೇಶದ ಸಂಸ್ಕ್ರತಿ ವಿರೋಧಿಸುವವರಿಗೆ ಈ ಕಾಂಗ್ರೆಸ್ ಪದ್ಮಶ್ರೀಯಂತಹ ಪ್ರಶಸ್ತಿ ನೀಡಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪ್ರಶಸ್ತಿಗಳಿಗೆ ಗೌರವ ಸಿಗುವ ನಿಟ್ಟಿನಲ್ಲಿ ಕೆಲಸವಾಗುತ್ತಿವೆ. ನಿಸ್ವಾರ್ಥ ಸಮಾಜ ಸೇವಕರನ್ನು ಗುರುತ್ತಿಸಿ ಈಗ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಶಸ್ತಿಯಿಂದ ಕೈ ಬೀಡುವುದಿ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

