ಹಾವೇರಿ: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಬಿಜೆಪಿ ಆರೋಪವನ್ನು ತಳ್ಳಿಹಾಕಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಇದು ನನ್ನ ವಿರುದ್ಧದ ರಾಜಕೀಯ ಷಡ್ಯಂತ್ರ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.
ಶಿಗ್ಗಾಂವಿ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಬಂದಿರುವ ಆರೋಪ ರಾಜಕೀಯ ಷಡ್ಯಂತ್ರ. ನಮ್ಮ ಇಲಾಖೆಯಲ್ಲಿ ಈ ರೀತಿಯ ಯಾವುದೇ ಅವ್ಯವಹಾರ ನಡೆದಿಲ್ಲ. ಯಾವುದೇ ನೇಮಕಾತಿ ನಡೆದಿಲ್ಲ, ಯಾವುದೇ ವರ್ಗಾವಣೆ ನಡೆದಿಲ್ಲ ಯಾವುದೇ ಬಡ್ತಿ ನೀಡಿಲ್ಲ ಎಂದರು.
ನಾನು ಯಾರನ್ನೂ ವರ್ಗಾವಣೆ ಮಾಡೇ ಇಲ್ಲ ಅವರು ಯಾರಿಗೆ ಹಣ ಕೊಟ್ಟಿದ್ದಾರೆ ಗೊತ್ತಿಲ್ಲ ಆ ರೀತಿ ಹಣ ನೀಡಿದ್ದರೆ ಯಾರಿಗೆ ನೀಡಿದ್ದಾರೆ ಕೇಳಿ, ನಾನು ಯಾವುದೇ ಹಣ ತಗೊಂಡಿಲ್ಲ. ಲೈಸೆನ್ಸ್ ನವೀಕರಣಕ್ಕೆ ಯಾರಿಗೂ ಯಾವುದೇ ಕಿರುಕುಳ ನೀಡಿಲ್ಲ ಮತ್ತು ಹಣ ಪಡೆದಿಲ್ಲ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

