Breaking News

ಬೆಳಗಾವಿಯಲ್ಲಿ ಅಪರಿಚಿತರಿಂದ ಗುಂಡಿನ ದಾಳಿ: ಯುವಕ ಸಾವು

ಖಾನಾಪುರ: ಖಾನಾಪುರ ತಾಲ್ಲೂಕಿನ ಐತಿಹಾಸಿಕ ಹಲಸಿ ಗ್ರಾಮ ವ್ಯಾಪ್ತಿಯಲ್ಲಿ ಇಂದು ನಸುಕಿನಲ್ಲಿ ಅಪರಿಚಿತರು ಗುಂಡು ಹಾರಿಸಿದ್ದು ಯುವಕ ಮೃತಪಟ್ಟಿದ್ದಾನೆ.
ಹಲಸಿ ನಿವಾಸಿ ಅಲ್ತಾಫ್‌ ಮಕಾನದಾರ (30) ಸಾವಿಗೀಡಾದವರು. ಕಾಡಂಚಿಗೆ ಇರುವ ರಸ್ತೆ ಪಕ್ಕದ ಮರಳು ತೆಗೆಯುವ ಸ್ಥಳದಲ್ಲಿ ಘಟನೆ ನಡೆದಿದೆ.
ಗುಂಡು ನೇರವಾಗಿ ಯುವಕನ ಎದೆಭಾಗದ ಕೆಳಗೆ ಬಿದ್ದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ಪೊಲೀಸರಿಗೆ ಸ್ಪಷ್ಟವಾಗಿ ಗೊತ್ತಾಗಿಲ್ಲ.
ಬೆಳಿಗ್ಗೆ ಯುವಕನ ಶವ ನೋಡಿದ ಮೇಲೆಯೇ ಗೊತ್ತಾಗಿದೆ. ಉತ್ತರ ವಲಯ ಐಜಿಪಿ ವಿಕಾಶಕುಮಾರ್‌ ವಿಕಾಶ್‌ ಸ್ಥಳಕ್ಕೆ ಧಾವಿಸಿದ್ದಾರೆ. ರಸ್ತೆ ಸಂಚಾರ ಬಂದ್‌ ಮಾಡಿದ್ದು, ಸ್ಥಳ ಮಹಜರು ನಡೆದಿದೆ.

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *