ಹುಬ್ಬಳ್ಳಿ: ಪ್ರಧಾನಮಂತ್ರಿ ಮೋದಿಯವರಿಗೆ ಬೈದರೇ ಫೇಮಸ್ ಆಗ್ತಿವಿ ಎನ್ನುವ ಭ್ರಮೆ ಯಲ್ಲಿ ಸಿಎಂ ಸಿದ್ದರಾಮಯ್ಯನವರು, ಕಾಂಗ್ರೆಸ್ ನಾಯಕರು ಇದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮುಡಾ, ವಾಲ್ಮೀಕಿ ನಿಗಮ, ಕಾರ್ಮಿಕ ಇಲಾಖೆಯಲ್ಲಿ ಬಹುದೊಡ್ಡ ಭ್ರಷ್ಟಾಚಾರ ಆಗಿದೆ. ಇದನ್ನು ಡೈವರ್ಟ್ ಮಾಡಲು ಮೋದಿಯವರನ್ನು ಬೈಯುವುದು ಸರಿಯಲ್ಲ ಎಂದರು.
ಕೋಟ್ಯಾಂತರ ಹಣವನ್ನು ತಿಂದಿರುವ ಬಗ್ಗೆ ಒಪ್ಪಿಕೊಂಡಿದ್ದು, ಮುಡಾದಲ್ಲಿ ತಹಶೀಲ್ದಾರರ ಹಣವನ್ನು ತುಂಬಿರುವ ಹೊಸ ಸಾಕ್ಷಿ ಸಿಕ್ಕಿರುವುದನ್ನು ನೋಡಿದರೇ ಇನ್ನಾದರೂ ನಿಮ್ಮ ತಪ್ಪನ್ನು ಒಪ್ಪಿಕೊಂಡು ವಿವರಣೆ ನೀಡಿ ಎಂದು ಆಗ್ರಹಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

